ಬೆಳಗ್ಗೆದ್ದ ಕೂಡಲೇ ಕಾಫಿ, ಚಹಾ ಸೇವನೆಗಿಂತ ಯಾವುದಾದರೂ ಬಗೆಯ ತರಕಾರಿಗಳ ಜ್ಯೂಸ್ ಸೇವನೆಯಿಂದ ಹಲವು ಆರೋಗ್ಯದ ಲಾಭಗಳನ್ನು ಪಡೆಯುವುದು.
ಹಾಗೆಯೇ ಬೂದು ಬಣ್ಣದ ಕುಂಬಳಕಾಯಿ ಬೇಸಿಗೆಯ ಮಿತ್ರ. ನಿತ್ಯವೂ ಈ ಬೂದುಗುಂಬಳಕಾಯಿ ಜ್ಯೂಸನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು.
ಬೂದು ಕುಂಬಳಕಾಯಿ ಅತ್ಯುತ್ತಮ ಡಿಟಾಕ್ಸಿಫೈಯರ್ ಕೂಡ ಹದು. ಇದರ ಜ್ಯೂಸನ್ನು ನಿತ್ಯವೂ ಬೆಳಗ್ಗೆ ಎದ್ದ ಕೂಡಲೇ ಕುಡಿಯುವುದರಿಂದ ದೇಹದ ಕಶ್ಮಲಗಳೆಲ್ಲ ಹೊರ ಕಳಿಸುವಲ್ಲಿ ಇದು ಮುಖ್ಯ ಪಾತ್ರ ವಹಿಸುತ್ತದೆ.