ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಮಗುವಿಗೆ HMPV ವೈರಸ್ ಪತ್ತೆಯಾಗಿದೆ. 3 ತಿಂಗಳ ಮಗುವಿಗೆ HMPV ಸೋಂಕು ಇರುವುದು ಪತ್ತೆಯಾಗಿದ್ದು ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಎಂದು ಮಾಹಿತಿ ತಿಳಿದು ಬಂದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ HMPV ಪತ್ತೆಯಾಗಿದ್ದು, ಇದೀಗ ಮಗು ಡಿಸ್ಚಾರ್ಜ್ ಆಗಿದೆ. ಈಗಾಗಲೇ ಬೆಂಗಳೂರಿನ 8 ತಿಂಗಳ ಮಗುವಿಗೂ HMPV ಪತ್ತೆಯಾಗಿದ್ದು, ಇದೀಗ ಇದು ಎರಡನೇ ಕೇಸ್ ಆಗಿದೆ.
