ಬೆಂಗಳೂರು: ಕೋಣನಕುಂಟೆಯಲ್ಲಿ ನಡೆದ ಅಪಘಾತದ ನಂತರ ನಟ ನಾಗಭೂಷಣ್ ಮೊದಲಬಾರಿಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಒಂದು ಅಪಘಾತವಾಗಿ ನಾನು ಮಾತಾಡ್ಬೇಕಿತ್ತು, ಮೆಂಟಲ್ಲಿ ತುಂಬಾ ನೋವಲ್ಲಿದ್ದೆ ಅದಕ್ಕೆ ಎಲ್ಲೂ ಏನೂ ಹೇಳೋಕೆ ಆಗಿಲ್ಲ. RR ನಗರದಿಂದ ಕೋಣನಕುಂಟೆಗೆ ಹೋಗ್ತಿದ್ದೆ ಈ ವೇಳೆ ಪ್ರೇಮಾ ಅವರು ಸಡನ್ ಆಗಿ ನನ್ನ ಕಾರ್ ಮುಂದೆ ಬಂದ್ರು. ನಾನು ಚಲಿಸ್ತಿದ್ದ ರೋಡ್ ತುಂಬಾನೇ ಚಿಕ್ಕದು. ಆ ವೇಳೆ ನಾನು ಏನು ಮಾಡೋಕೆ ಸಾಧ್ಯ ಎಂದು ನಟ ನಾಗಭೂಷಣ್ ಆಕ್ಸಿಡೆಂಟ್ ಡಿಟೇಲ್ಸ್ ಕೊಟ್ಟರು. ಪೊಲೀಸ್ ಠಾಣೆಯಲ್ಲೂ ಎಲ್ಲ ಹೇಳಿದ್ದೀನಿ. ನಾನು ಹಿಟ್ & ರನ್ ಮಾಡಿಲ್ಲ. ನಾನು ಎಲ್ಲೂ ಓಡಿಹೋಗಲ್ಲ. ಆಕ್ಸಿಡೆಂಟ್ ನಡೆದ ಬಳಿಕ ಪ್ರೇಮಾ ಅವರನ್ನು ನಾನೇ ನನ್ನ ಮಡಿಲಲ್ಲಿ ಹಾಕಿಕೊಂಡು ಆಸ್ಪತ್ರೆಗೂ ಕರೆದುಕೊಂಡು ಹೋದೆ ಆದರೆ ಅವರ ಜೋವ ಉಳಿಲಿಲ್ಲ ಎಂದು ಕಂಬನಿ ಮಿಡಿದರು. ಅಪಘಾತ ಆದ ತಕ್ಷಣ ನಾನೇ ಪೊಲೀಸರಿಗೆ ಕರೆ ಮಾಡಿ ನನ್ನಿಂದ ಹೀಗೊಂದು ಅಪಘಾತವಾಗಿದೆ ಎಂದು ಕೂಡ ಹೇಳಿದ್ದೇನೆ, ಆಕ್ಸಿಡೆಂಟ್ ಆಗಿರೋ ಬಗ್ಗೆ ಮಾಹಿತಿ ಕೊಟ್ಟಿದ್ದೆ. ಬಳಿಕ ಪೊಲೀಸರು ಮೊದಲು ಕುಡಿದ್ದಿಯ ಅಂತ ಕೇಳಿದ್ರು. ಆಲ್ಕೋಹಾಲ್ ಟೆಸ್ಟ್, ರಕ್ತ ಪರೀಕ್ಷೆ ಆಯ್ತು. ಬೆಳಿಗ್ಗೆ ಸ್ಟೇಷನ್ ಬೇಲ್ ಕೊಟ್ರು ಎಂದರು. ನನಗೆ ಮನುಷ್ಯತ್ವ ಇದೆ. ಸ್ವಇಚ್ಛೆ ಹೇಳಿಕೆ ಕೊಟ್ಟೆ ಹಾಗಾಗಿ ಬೇಲ್ ಸಿಕ್ತು. ನನಗೆ ಜೀವಗಳ ಬೆಲೆ ಗೊತ್ತಿದೆ 25 ವರ್ಷಗಳ ಹಿಂದೆ ನನ್ ತಂದೆನ ಅಪಘಾತದಲ್ಲೇ ಕಳೆದುಕೊಂಡೆ. ಪ್ರತಿ ಗೌರಿ ಹಬ್ಬದಲ್ಲೂ ಅದೇ ನೆನಪಾಗುತ್ತೆ ಎಂದರು. ನಾನು ಎಲ್ಲರನ್ನ ನಗಿಸ್ತೀನಿ, ನನಗೆ ಅಳಿಸೋಕೆ ಇಷ್ಟವಿಲ್ಲ ದಯವಿಟ್ಟು ಹಿಟ್ & ರನ್ ಅಂತ ಮಾತಾಡ್ಬೇಡಿ ಎಂದು ಮನವಿ ಮಾಡಿದ್ರು. ಇನ್ನು ಪ್ರೇಮಾ ಅವರ ಕುಟುಂಬದ ನೋವಲ್ಲಿ ನಾನು ಭಾಗಿಯಾಗ್ತೀನಿ. ಅವರಿಗೆ ನನ್ನಿಂದ ಏನು ಸಹಾಯ ಮಾಡೋಕಾಗುತ್ತೋ ಅದನ್ನ ನಾನು ಮಾಡಬಲ್ಲೇ ಎಂದು ಈ ಸಂದರ್ಭದಲ್ಲಿ ಹೇಳಿದರು.