ಬೆಂಗಳೂರು : ಓಲಾ, ಉಬರ್ ಆಟೋ ಸೇವಾ ಶುಲ್ಕ ಶೇಕಡಾ 5% ನಿಗದಿ ಮಾಡಿ ಹೈ ಕೋರ್ಟ್ ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರದ ಆದೇಶವನ್ನು ಹೈ ಕೋರ್ಟ್ ಎತ್ತಿಹಿಡಿದೆ.
ಈ ಹಿಂದೆ ಅಷ್ಟೇ ರಾಜ್ಯ ಸರ್ಕಾರ ಓಲಾ, ಉಬರ್ ಆಟೋ ಸಂಚಾರಕ್ಕೆ ಶುಲ್ಕವನ್ನು ಶೇ. 5ರಷ್ಟು ನಿಗದಿ ಮಾಡಿತ್ತು, ಆದರೆ ಶುಲ್ಕ ಹೆಚ್ಚುಪಡಿಸೋ ನಿಟ್ಟಿನಲ್ಲಿ ಅಗ್ರಿಗ್ರೇಟರ್ ಕಂಪನಿಗಳು ಹೈ ಕೋರ್ಟ್ ಗೆ ಪ್ರಶ್ನೆ ಮಾಡಿ ಅರ್ಜಿ ಸಲ್ಲಿಸಿದ್ದರು. 2022 ರಂದು ರಾಜ್ಯ ಸರ್ಕಾರ ಓಲಾ, ಉಬರ್ ಆಟೋ ಪ್ರಯಾಣಕ್ಕೆ ಶೇ. 5ರಷ್ಟು ಮಾತ್ರವೇ GST ವಿಧಿಸುವಂತೆ ಎಲ್ಲಾ ಪ್ರಾದೇಶಿಕ ಸಾರಿಗೆಗಳಿಗೆ ಆದೇಶ ಹೊರಡಿಸಿತ್ತು. ಆದರೆ, ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿ ಕೂಡಲೇ ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು. ಇದೀಗ ಖಾಸಗಿ ಕಂಪನಿಗಳು ಸಲ್ಲಿಸಿದ ಅರ್ಜಿಗಳನ್ನು ವಜಾಗೊಳಿಸಿರುವ ಹೈ ಕೋರ್ಟ್, ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ. ಓಲಾ, ಉಬರ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ರಾಜ್ಯ ಸರ್ಕಾರ ಆದೇಶವನ್ನು ಎತ್ತಿಹಿಡಿದು, ಮನಸೋ ಇಚ್ಛೆ ಶುಲ್ಕ ವಿಧಿಸುವ ಖಾಸಗಿ ಸಂಸ್ಥೆಗಳಿಗೆ ಕಡಿವಾಣ ಹಾಕಿದ್ದಾರೆ.