ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಅರೆಸ್ಟ್ ಆದ ನಂತರ ಪಟ್ಟಣಗೆರೆ ಶೆಡ್ ಸಖತ್ ಟ್ರೆಂಡ್ ಆಗ್ತಿದೆ. ಗೂಗಲ್ ಮ್ಯಾಪ್‌ನಲ್ಲಿ ಪಟ್ಟಗೆರೆ ಶೆಡ್‌ಗೆ 4.8 ಸ್ಟಾರ್ ರೇಟಿಂಗ್ ಸಿಕ್ಕಿದೆ. ಪಟ್ಟಣಗೆರೆ ಶೆಡ್‌ಗೆ ನೆಟ್ಟಿಗರಿಂದ ಚಿತ್ರ ವಿಚಿತ್ರ ರಿವ್ಯೂಗಳು ಬರ್ತಿದ್ದು, 100ಕ್ಕೂ ಅಧಿಕ ಮಂದಿ ಪಟ್ಟನಗೆರೆ ಶೆಡ್‌ಗೆ ರಿವ್ಯೂ ಬರೆದಿದ್ದಾರೆ. ಇದೇ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿನ್ನ ಕೊಲೆ ಮಾಡಿದ ಆರೋಪದಡಿ ಜೈಲು ಸೇರಿದ್ದಾರೆ. ಘಟನೆ ಬಳಿಕ ಸುದ್ದಿಯಾಗಿದ್ದ ಪಟ್ಟಣಗೆರೆ ಶೆಡ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಇದರ ಬೆನ್ನಲ್ಲೇ ಗೂಗಲ್‌ನಲ್ಲಿ ಪಟ್ಟಣಗೆರೆ ಶೆಡ್ 4.8 ಸ್ಟಾರ್ ರೇಟಿಂಗ್ ಸಿಕ್ಕಿದೆ.
