ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಸಂಜೆ ವಾಹನ ದಟ್ಟಣೆಯಿಂದ ವಾಹನ ಸವಾರರು ನರಕಯಾತನೆ ಅನುಭವಿಸಿದ್ದಾರೆ.
ಟೆಕ್ಕಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಸುಮಾರು ನಾಲ್ಕು ಗಂಟೆಗಳ ಕಾಲ ರಸ್ತೆಯಲ್ಲಿ ಸಿಲುಕಿಕೊಂಡಿದ್ದಾರೆ
10 ಲಕ್ಷ ಐಟಿ ಉದ್ಯೋಗಿಗಳು ಕೆಲಸ ಮಾಡುವ ಔಟರ್ ರಿಂಗ್ ರೋಡ್ ಸುತ್ತಮುತ್ತ ಸುಮಾರು 3.50 ಲಕ್ಷ ವಾಹನಗಳು ಸಿಲುಕಿಕೊಂಡಿವೆ. ಮಂಗಳವಾರದಂದು ಬೆಂಗಳೂರು
ಬಂದ್ ಮತ್ತು ಇಂದಿನಿಂದ ಸರಣಿ ರಜಾ ದಿನಗಳು ಆರಂಭವಾಗಿರುವುದರಿಂದ ಲಕ್ಷಗಟ್ಟಲೆ ವಾಹನಗಳು ಒಮ್ಮೆಲೇ ರಸ್ತೆಗಿಳಿದಿವೆ. ಇದೇ ವೇಳೆ ಮಳೆ ಸುರಿದ ಪರಿಣಾಮ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ.