ಬೆಂಗಳೂರು: ದೂರದ ಊರಿನಿಂದ ಸಿಲಿಕಾನ್ ಸಿಟಿಗೆ ಬರೋ ಹೆಣ್ಣುಮಕ್ಕಳೇ ಈ ಸ್ಟೋರಿ ನೋಡ್ಲೇ ಬೇಕು. ಹಿಂದೆ ಮುಂದೆ ನೋಡದೆ ಪಿಜಿ ಮಾಡಿದರೆ ನಿಮ್ಮ ಮಾನಕ್ಕೆ ಕುತ್ತು ಬರೋದು ಗ್ಯಾರಂಟಿ. ಪಿಜಿ ಬೇಡ ಅಂತ ಕ್ಯಾನ್ಸಲ್ ಮಾಡಿದ್ದಕ್ಕೆ ಯುವತಿಯ ಫೋನ್ ನಂಬರ್ ಅನ್ನು ಪಿಜಿ ಮ್ಯಾನೇಜರ್ ಕಾಲ್ ಗರ್ಲ್ ವೆಬ್ಸೈಟ್ನಲ್ಲಿ ಹರಿ ಬಿಟ್ಟಿದ್ದಾನೆ. ಶೇಷಾದ್ರಿಪುರದಲ್ಲಿರೋ ವಿ ಸ್ಟೇಜ್ ಲೇಡಿಸ್ ಪಿಜಿ ಮ್ಯಾನೇಜರ್ ಆನಂದ್ ಶರ್ಮಾ ಎಂಬುವಾತ ದುಷ್ಕೃತ್ಯಕ್ಕೆ ಯುವತಿ ಬೆಚ್ಚಿ ಬಿದ್ದಿದ್ದಾಳೆ. ಯುವತಿ ವಿ ಸ್ಟೇಜ್ ಪಿಜಿಗೆ ಅಡ್ಮಿಶನ್ ಆಗಿದ್ದಾಳೆ. ಪಿಜಿ ಇಷ್ಟ ಆಗಿಲ್ಲ ಅಂತ ಪಿಜಿ ಆಡ್ಮಿಶನ್ ಕ್ಯಾನ್ಸಲ್ ಮಾಡಿದ್ದಾಳೆ. ಗೂಗಲ್ ರಿವ್ಯೂನಲ್ಲಿ ಪಿಜಿ ಅವ್ಯವಸ್ಥೆ ಬಗ್ಗೆ ಯುವತಿ ಬರೆದಿದ್ದಾಳೆ. ಇದಕ್ಕೆ ಕುಪಿತಗೊಂಡ ಮ್ಯಾನೇಜರ್ ಗೂಗಲ್ ರಿವ್ಯೂ ಕಾಮೆಂಟ್ನಲ್ಲೆ ಯುವತಿಗೆ ನಿಂದಿಸಿದ್ದಾನೆ. ಸಾಲದ್ದಕ್ಕೆ ಲೊಕೆಂಟೋ ಸೇರಿದಂತೆ ಕೆಲ ಕಾಲ್ ಗರ್ಲ್ ವೆಬ್ಸೈಟ್ನಲ್ಲಿ ಯುವತಿ ನಂಬರ್ ಹಾಕಿ ಯುವತಿಯನ್ನು ಕಾಲ್ ಗರ್ಲ್ ನಂತೆ ಬಿಂಬಿಸಿದ್ದಾನೆ. ಯುವತಿ ನಂಬರ್ಗೆ ಅನೇಕರು ಕರೆ ಮಾಡಿ ರೇಟ್ ಎಷ್ಟು ರೂಮ್ಗೆ ಬಾ ಅಂತೆಲ್ಲ ಕರೆ ಮಾಡಿ ಟಾರ್ಚರ್ ನೀಡಿದ್ದಾರೆ. ಯುವತಿ ಪೂರ್ವ ವಿಭಾಗ ಸೆನ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾಳೆ. ಪೊಲೀಸ್ರು ತನಿಖೆ ನಡೆಸಿದಾಗ ಲೊಕೆಂಟೋ ವೆಬ್ ಸೈಟ್ನಲ್ಲಿ ಪಿಜಿ ಮ್ಯಾನೇಜರ್ ನಂಬರ್ ಹಾಕಿರೋದು ಪತ್ತೆಯಾಗಿದೆ. ಸದ್ಯ ಪೊಲೀಸರು ಪಿಜಿ ಮ್ಯಾನೇಜರ್ ಆನಂದ್ ಶರ್ಮಾನನ್ನ ಬಂಧಿಸಿದ್ದಾರೆ.
