ಬೆಂಗಳೂರು ಪೊಲೀಸರು ಬಾರಿ ಮಹತ್ವದ ಕಾರ್ಯಾಚರಣೆ ನಡೆಸಿ ಆಂದ್ರ ಪ್ರದೇಶದ ಸೈಬರ್ ಹ್ಯಾಕರ್ ನನ್ನು ಬಂಧಿಸಿದ್ದು ನಗ ನಗದು ಸೇರಿ ಕೋಟ್ಯಾಂತರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು : ಬೆಂಗಳೂರು ಪೊಲೀಸರು ಬಾರಿ ಮಹತ್ವದ ಕಾರ್ಯಾಚರಣೆ ನಡೆಸಿ ಆಂದ್ರ ಪ್ರದೇಶದ ಸೈಬರ್ ಹ್ಯಾಕರ್ ನನ್ನು ಬಂಧಿಸಿದ್ದು ನಗ ನಗದು ಸೇರಿ ಕೋಟ್ಯಾಂತರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರದ ಲಕ್ಷ್ಮೀಪತಿ ಬಂಧಿತ ಆರೋಪಿಯಾಗಿದ್ದಾನೆ.
ರಿವಾಡ್ರ್ಸ್360 ಕಂಪೆನಿ ವೆಬ್ ಸೈಟನ್ನು ಹ್ಯಾಕ್ ಮಾಡಿದ ಲಕ್ಷ್ಮೀ ಪತಿ ಚಿನ್ನ, ಬೆಳ್ಳಿ ಖರೀದಿಸಿದ್ದ.
ಬೆಂಗಳೂರು ಆಗ್ನೇಯ ವಿಭಾಗದ ಸೆನ್ ಠಾಣೆ ಪೊಲೀಸರು ಈತತನ್ನು ಬಂಧಿಸಿ ಆರೋಪಿಯಿಂದ 3.40 ಕೋಟಿ ಮೌಲ್ಯದ 5.269 ಕೆಜಿ ಚಿನ್ನಾಭರಣ, 21.80 ಲಕ್ಷ ಮೌಲ್ಯದ 27.250 ಕೆಜಿ ಬೆಳ್ಳಿ ವಸ್ತುಗಳು, 11.13 ಲಕ್ಷ ರೂ. ನಗದು, 12 ಲಕ್ಷ ಮೌಲ್ಯದ ವಿವಿಧ ಕಂಪೆನಿಯ 7 ದ್ವಿಚಕ್ರ ವಾಹನ, 26 ಲಕ್ಷ ಮೌಲ್ಯದ ಪ್ಲಿಪ್ ಕಾರ್ಟ್ ವಾಲೇಟ್ ಫ್ರೀಜ್ ಆದ ಹಣ, 3.50 ಲಕ್ಷ ರೂ. ಅಮೇಜಾನ್ ವಾಲೇಟ್ ಫ್ರೀಜ್ ಆದ ಹಣ, 1.30 ಲಕ್ಷ ಮೌಲ್ಯದ ಎರಡು ಲ್ಯಾಪ್ ಟಾಪ್ ಹಾಗೂ 90 ಸಾವಿರ ಮೌಲ್ಯದ 3 ಮೊಬೈಲ್ ಗಳು ಸೇರಿ ಒಟ್ಟು 4 ಕೋಟಿ 16 ಲಕ್ಷ 63 ಸಾವಿರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ರಿವಾಡ್ರ್ಸ್ 360 ಕಂಪೆನಿಯ ಡೈರೆಕ್ಟರ್ ಅವರು ತಮ್ಮ ಕಂಪೆನಿಯ ವತಿಯಿಂದ ಗ್ರಾಹಕರಿಗೆ ನೀಡುವ ವೋಚರ್ ಗಳನ್ನು ಕಂಪೆನಿಯ ಗ್ರಾಹಕರು ಬಳಕೆ ಮಾಡುವ ಮೊದಲೇ ಕಂಪೆನಿಯ ವೆಬ್‌ಸೈಟನ್ನು ಯಾರೋ ಹ್ಯಾಕ್ ಮಾಡಿ ಬಳಸುತ್ತಿರುವ ಬಗ್ಗೆ ಆಗ್ನೇಯ ವಿಭಾಗದ ಸೆನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪತ್ತೆಗೆ ತಂಡವನ್ನು ರಚಿಸಲಾಗಿತ್ತು.
ಆಗ್ನೇಯ ವಿಭಾಗದ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಹರೀಶ್ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಈ ಕೃತ್ಯ ಬಯಲಾಗಿದೆ.
ಆಂದ್ರಪ್ರದೇಶದ ಐಐಟಿ ಯಲ್ಲಿ ಬಿಟೆಕ್ ಪದವಿ ಪಡೆದಿರುವ ಆರೋಪಿ ಲಕ್ಷ್ಮೀಪತಿ ಕಂಪ್ಯೂಟರ್ ನಲ್ಲಿ ಪರಿಣಿತಿ ಹೊಂದಿದ್ದನು.
ಪದವಿ ಮುಗಿಸಿದ ನಂತರ ದುಬೈಗೆ ಹೋಗಿದ್ದ ಈತ ವಾಪಾಸ್ ಬೆಂಗಳೂರಿಗೆ ಬಂದು ನೆಲೆಸಿದ್ದಾಗ ಈ ಕೃತ್ಯ ಎಸಗಿದ್ದಾನೆ.
ಕಾಲೇಜು ದಿನಗಳಲ್ಲೆ ಹ್ಯಾಕಿಂಗ್ ಮಾಡುವುದನ್ನು ಕಲಿತಿದ್ದನು. ಐಷಾರಾಮಿ ಜೀವನ ನಡೆಸಲು ಈ ಕೃತ್ಯವೆಸಗಿರುವುದು ತನಿಖೆಯಿಂದ ಗೊತ್ತಾಗಿದೆ.
ಪ್ರಕರಣದ ತನಿಖೆ ಮುಂದುವರೆದಿದೆ. ಅಧಿಕಾರಿಗಳ ಹಾಗೂ ಸಿಬ್ಬಂದಿ ಕರ್ತವ್ಯವನ್ನು ನಗರ ಪೊಲೀಸ್ ಆಯುಕ್ತರಾದ ಬಿ ದಯಾನಂದ ಪ್ರಶಂಸಿಸಿದ್ದಾರೆ.