ಬೆಂಗಳೂರು: ಪ್ರಿಯತಮೆ ಫೋಟೋ ಆ್ಯಪ್ ಮೂಲಕ ಬೆತ್ತಲು ಮಾಡಿ ವೈರಲ್ ಮಾಡ್ತಿದ್ದ ಕಾಮುಕ ಅರೆಸ್ಟ್

ಬೆಂಗಳೂರು: ಬೆತ್ತಲೆ ವಿಡಿಯೋ ನೋಡೋದು ಕಾಮ ಪ್ರಚೋದಿತ ಕತೆಗಳನ್ನ ಓದೋ ಅಭ್ಯಾಸ ಕೆಲವರಿಗೆ ಇರುತ್ತದೆ. ಇದೇ ರೀತಿ ಕಾಮೋದ್ರೇಕಕ್ಕೆ ಒಳಗಾಗಿ ವಿಚಿತ್ರ ಸುಖ ಪಡುತ್ತಿದ್ದ ಆರೋಪಿಯೊಬ್ಬ ತನ್ನ ಪ್ರೇಮಿಯ ಫೋಟೋವನ್ನು ಬೆತ್ತಲೆ ಮಾಡಿ ವಿಚಿತ್ರ ಸುಖ ಪಡುತ್ತಿದ್ದ. ಅದಕ್ಕಾಗಿ ಈ ವಿಕೃತ ಕಾಮಿ BOT ಅನ್ನೋ ಆ್ಯಪ್ ಬಳಸಿ ತನ್ನ ಪ್ರಿಯತಮೆ ಫೋಟೋವನ್ನು ಬೆತ್ತಲು ಮಾಡ್ತಿದ್ದ.

ಇದೇ ಫೋಟೊಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕ್ತಿದ್ದ. ಇದರಲ್ಲಿ ಬರೋ ಕಾಮೆಂಟ್‌ಗಳನ್ನು ವಿಕೃತವಾಗಿ ಎಂಜಾಯ್ ಮಾಡ್ತಿದ್ನಂತೆ ಈ ವಿಕೃತಕಾಮಿ. ಫೋಟೋ ವೈರಲ್ ಆದಾಗ ಪ್ರಿಯತಮೆ ಜೊತೆ ಈತನೆ ಆಕೆಯ ಜೊತೆಗೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ನಂತೆ. ಕೇಸ್ ದಾಖಲಿಸಿಕೊಂಡ ಪೊಲೀಸ್ರು ತನಿಖೆ ವೇಳೆ ವಿಕೃತ ಕಾಮಿಯ ಕಳ್ಳಾಟವನ್ನ ಬಯಲು ಮಾಡಿದ್ದಾರೆ. ಫೋಟೊ ಅಪ್ಲೋಡ್ ಮಾಡಿ ಅದಕ್ಕೆ ಬರುವ ಕಮೆಂಟ್‌ನಿಂದ ಸುಖ ಸಿಗ್ತಿತ್ತಂತೆ ಆಸಾಮಿಗೆ. ಈ ರೀತಿ ವಿಕೃತ ಸುಖ ಅನುಭವಿಸ್ತಿದ್ದಿದ್ದು ಈತ ಮಾತ್ರ ಅಲ್ಲ ಈತನ ಜೊತೆಗೆ ಇದ್ದ 12 ಜನ ಸ್ನೇಹಿತರು ವಿಕೃತ ಸುಖ‌ ಪಡ್ತಿದ್ರಂತೆ. ಟೆಲಿಗ್ರಾಮ್‌ನಲ್ಲಿ ಗ್ರೂಪ್ ಹೊಂದಿದ್ದ ಆಸಾಮಿಗಳು d3vil-official ಮತ್ತು discord ಎಂಬ ಹೆಸರಿನ ಗ್ರೂಪ್‌ನಲ್ಲಿ ತಮ್ಮ ತಮ್ಮ ಪ್ರಿಯತಮೆ ಹಾಗೂ ಸ್ನೇಹಿತೆಯರ ನಗ್ನ ಫೋಟೋ ಹಾಕ್ತಿದ್ರಂತೆ. ಹೀಗೆ ಸುಮಾರು ನೂರಕ್ಕೂ ಹೆಚ್ಚು ಯುವತಿಯರ ಫೋಟೊ ಶೇರ್ ಆಗಿರೋದು ತನಿಖೆಯಲ್ಲಿ ಕಂಡು ಬಂದಿದೆ. ಇನ್‌ಸ್ಟಾಗ್ರಾಮ್ ನಲ್ಲೂ ಫೋಟೋ ಶೇರ್ ಮಾಡ್ತಿದ್ರಂತೆ.

ಮದುಗೆ ಆಗೊ ಯೋಚನೆಯಲ್ಲಿದ್ದಾಗಲೇ ಪ್ರಿಯತಮೆಗೆ ಫೋಟೋ ವಿಚಾರ ಗೊತ್ತಗಿದ್ದು, ಈ ಬಗ್ಗೆ ಆಗ್ನೇಯ ವಿಭಾಗ ಸೆನ್ ಠಾಣೆ ದೂರು ನೀಡಿದ್ದಳು. ಸದ್ಯ ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ತಮಿಳುನಾಡು ವೆಲ್ಲೂರು ಮೂಲದ ಅಂಜಯ್ (26) ಬಂಧಿತ ಆರೋಪಿಯಾಗಿದ್ದು, ಒಂದೇ ಊರಿನವರಾಗಿದ್ದ 24 ವರ್ಷದ ಪ್ರಿಯತಮೆ ಹಾಗೂ ಆರೋಪಿ10 ನೇ ತರಗತಿಯಿಂದ ಒಟ್ಟಿಗೆ ಓದುತ್ತಿದ್ರು. ಬಿ.ಪ್ಲಾನಿಂಗ್ ಅನ್ನೋ ಕೋರ್ಸ್ ಮಾಡಿದ್ದ ಸಂಜಯ್ ಹಾಗೂ ಯುವತಿ ಇಬ್ಬರು ಬೆಂಗಳೂರಲ್ಲಿ ಒಟ್ಟಿಗೆ ವಾಸ ಮಾಡ್ತಿದ್ರು. ಪ್ರೀತಿ ವಿಚಾರ ಎರಡು ಕುಟುಂಬಸ್ಥರಿಗೆ ಗೊತ್ತಿದ್ದು, ಮದುವೆ ಮಾಡಿಸೊ ತಯಾರಿ ಕೂಡ ಮಾಡಿಕೊಂಡಿದ್ರಂತೆ. 2021ರಲ್ಲಿಯೂ ಇನ್ಸ್ಟಾಗ್ರಾಮ್ ನಲ್ಲಿ ಯುವತಿ ಫೋಟೊ ಶೇರ್ ಆಗಿದ್ದು, ಆಗ ರಿಪೋರ್ಟ್ ಮಾಡಿ ಫೋಟೊ ತೆಗಿಸಲಾಗಿತ್ತಂತೆ. ಮತ್ತೆ 2023 ಜೂನ್ ನಲ್ಲಿ ಯುವತಿಯ ಫೋಟೊ ಶೇರದ ಆಗಿದ್ರಿಂದ ವಿಚಾರವನ್ನು ಸಂಜಯ್ ಗೆ ಹೇಳಿದ್ದ ಯುವತಿ ಸಂಜಯ್ ಜೊತೆಗೆ ಬಂದು CEN ಪೊಲೀಸ್ ಠಾಣೆಗೆ ದೂರು‌ ನೀಡಿದ್ಲು.

Advertisement

ಪೊಲೀಸರ ಮುಂದೆ ಸಂಜಯ್ ಆರೋಪಿ ಪತ್ತೆ ಮಾಡಿ ಫೋಟೊ ಡಿಲಿಟ್ ಮಾಡಿಸಿ ಎಂದು ಪರಿ ಪರಿಯಾಗಿ ಬೇಡಿಕೊಂಡು ಫುಲ್ ಡ್ರಾಮ ಮಾಡಿದ್ನಂತೆ. ಆತನ ಡ್ರಾಮಾ ನೋಡಿ ಕಣ್ಣೀರು ಯುವತಿಯೂ ಸಹ ಕಣ್ಣೀರು ಹಾಕಿದ್ಲಂತೆ. ಎಫ್ಐಆರ್ ದಾಖಲಿಸಿ ತನಿಖೆಗೆ ಇಳಿದಿದ್ದ ಆಗ್ನೇಯ ವಿಭಾಗ ಸೆನ್ ಪೊಲೀಸರ ವಿಚಾರಣೆ ವೇಳೆ ಆರೋಪಿಯ ವಿಕೃತ ಕಾಮ ಬೆಳಕಿಗೆ ಬಂದಿದೆ. ವಿಚಾರ ಗೊತ್ತಾಗ್ತಿದ್ದಂತೆ ಆರೋಪಿ ಬಂಧಿಸುವಂತೆ ಯುವತಿಯೇ ಹೇಳಿದ್ದಾಳೆ. ಸದ್ಯ ಪೊಲೀಸ್ರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆರೋಪಿ ವಿಚಾರಣೆ ವೇಳೆ ಆತನ ಮತ್ತಷ್ಟು ಕಾಮಕೃತ್ಯ ಬಯಲಿಗೆ ಬಂದಿದ್ದು, BOT ಅನ್ನುವ ಅಪ್ಲಿಕೇಶನ್ ಡೆವಲಪ್ ಮಾಡ್ತಿದ್ದ ಆರೋಪಿ, ಈ ಅಪ್ಲಿಕೇಶನ್ ನಲ್ಲಿ ಯಾರದ್ದೇ ಫೋಟೊ ಹಾಕಿದ್ರು ಬೆತ್ತಲೆಯಾಗಿ ತೋರಿಸುತ್ತಂತೆ. ಅದೇ ರೀತಿ ಸ್ನೇಹಿತೆ,ಸಂಬಂಧಿಕರ ಫೋಟೊ ಹಾಕ್ತಿದ್ದ ಆರೋಪಿ ಬೆತ್ತಲೆ ನೋಡಿ‌ ವಿಚಿತ್ರ ಸುಖ ಪಡ್ತಿದ್ನಂತೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement