ಬೆಂಗಳೂರು: ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಅಂದಿನ ಸಿಸಿಬಿ ಎಸ್‌ಪಿ ಆಗಿದ್ದ ಡಿವೈಎಸ್ಪಿ ಗೌತಮ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಡಿವೈಎಸ್ಪಿ ಗೌತಮ್ ಅವರಿಗೆ ನೋಟೀಸ್ ನೀಡಿ ಸತತ ಎರಡು ದಿನ ಎಸ್ ಐಟಿ ವಿಚಾರಣೆ ನಡೆಸಿದೆ.
ಗೌತಮ್ ವಿಚಾರಣೆ ಬೆನ್ನಲ್ಲೇ ಸಿಸಿಬಿ ಕಚೇರಿಯಲ್ಲೂ ಸಹ ಎಸ್‌ಐಟಿ ಅಧಿಕಾರಿಗಳು ಮಹಜರ್ ಪ್ರಕ್ರಿಯೆ ನಡೆಸಿದ್ದಾರೆ. ಕೆಜಿ ನಗರ ಡ್ರಗ್ ಕೇಸ್ ಪ್ರಕರಣ ಸಂಬಂಧ ಸಿಸಿಬಿ ಕಚೇರಿಯಲ್ಲಿ ಮಹಜರ್ ಪ್ರಕ್ರಿಯೆ ನಡೆಡಿದ್ದು, ಕೆಂಪೇಗೌಡ ನಗರ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ ಕೇಸ್‌ನಲ್ಲಿ ಐಓ ಆಗಿದ್ದ ಅಂದಿನ ಇನ್ಸ್‌ಪೆಕ್ಟರ್ ಶ್ರೀಧರ ಪೂಜಾರ್ ಕ್ಯಾಬಿನ್ ಮಹಜರ್ ಮಾಡಲಾಗಿದೆ. ಇದೇ ವೇಳೆ ಸಿಸಿಬಿಯ ಮಾದಕವಸ್ತು ನಿಗ್ರಹ ದಳದ ಎಸಿಪಿಯಾಗಿ ಗೌತಮ್ ಕಾರ್ಯನಿರ್ವಹಿಸಿದ್ರು. ಈ ಪ್ರಕರಣದಲ್ಲಿ ಆರೋಪಿ ಸುಜಯ್‌ನ ಸಿಸಿಬಿ ವಶಕ್ಕೆ ಪಡೆದಾಗ ಮೊದಲ ದಿನ ಸುಜಯ್‌ನ ಸಿಸಿಬಿಗೆ ಕರೆತಂದು ಬಂಧಿಸದೆ ಬಿಟ್ಟು ಕಳುಹಿಸಿರೋ ಆರೋಪ ಕೇಳಿ ಬಂದಿದೆ. ಇದಾದ ನಂತರದಲ್ಲಿ ಸಿಸಿಬಿ ಸುಜಯ್‌ನ ಅರೆಸ್ಟ್ ಮಾಡಿದ್ರು. ಈ ಬೆಳವಣಿಗೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದೇ ವಿಚಾರಕ್ಕೆ ಗೌತಮ್ ರನ್ನ ಎಸ್ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಪಡೆದಿದೆ.