ಹೊಸಕೋಟೆ: ರಾಜಧಾನಿಯಲ್ಲಿ ಇಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ವಂಚನೆ ಮಾಡುತ್ತಿದ್ದ ಒಟ್ಟು ಏಳು ಮಾಂಸಹಾರಿ ಹಾಗೂ ಬಿರಿಯಾನಿ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಹೊಟೇಲ್ ಮಾಲೀಕನ ಬಳಿ 1.47 ಕೋಟಿ ನಗದು ಪತ್ತೆಯಾಗಿದ್ದು, ಆ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹೋಟೆಲ್ ಮಾಲೀಕ ಸರಕು ಮತ್ತು ಸೇವಾ ತೆರಿಗೆ ವಂಚನೆ ಮಾಡ್ತಿದ್ದ ಎಂದು ತಿಳಿದು ಬಂದಿದೆ. ಹೊಸಕೋಟೆ ಬಳಿಯ ಕೆಲವು ಹೊಟೇಲ್ ಮಾಲೀಕರು ಜಿಎಸ್ ಟಿ ವಂಚನೆ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಹೊಸಕೋಟೆಯ ಅಕ್ಷಯ್ ಧಮ್ ಬಿರಿಯಾನಿ, ರಾಜ್ ಧಮ್ ಬಿರಿಯಾನಿ, ಮಣಿ ಧಮ್ ಬಿರಿಯಾನಿ, ಆನಂದ್ ಧಮ್ ಬಿರಿಯಾನಿ, ರಾಜ್ ಧಮ್ ಬಿರಿಯಾನಿ ಸೇರಿದಂತೆ ವಿವಿಧ ಕಡೆಗಳಲ್ಲಿ ಶೋಧ ನಡೆಸಿದರು. ಒಬ್ಬ ಹೋಟೆಲ್ ಮಾಲೀಕ 30 QR ಕೋಡ್ ಹೊಂದಿದ್ದ. ಹೊಟೇಲ್ ಮಾರಾಟ ವಹಿವಾಟಿನ ಸರಿಯಾದ ಲೆಕ್ಕಪತ್ರ ಕೂಡಾ ನಿರ್ವಹಿಸ್ತಿರಲಿಲ್ಲ. ಬಿಲ್ ಗಳನ್ನು ಸರಿಯಾಗಿ ನೀಡದೆ ತೆರಿಗೆ ವಂಚನೆ ಮಾಡುತ್ತಿದ್ದನೆಂದು ತಿಳಿದು ಬಂದಿದೆ.