ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆ ಕದನದ ಅಖಾಡ ರಂಗು ಪಡೆದುಕೊಳ್ಳುತ್ತಿದೆ. ಮೈತ್ರಿ ನಾಯಕರು ಅಭ್ಯರ್ಥಿ ಆಯ್ಕೆ ಸಂಬಂಧ ದೆಹಲಿಯಲ್ಲಿ ಕೂತು ಸಭೆ ನಡೆಸುತ್ತಿದ್ದರೆ ಡಿಸಿಎಂ ಡಿಕೆಶಿ ಖುದ್ದು ಚನ್ನಪಟ್ಟಣ ಕ್ಷೇತ್ರದಲ್ಲಿ ಹೆಚ್ಚು ಓಡಾಟ ಶುರು ಮಾಡಿದ್ದಾರೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಉದ್ಯೋಗ ಮೇಳ ಸೇರಿದಂತೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ದೆಹಲಿ ಮೈತ್ರಿ ನಾಯಕರು ಅಭ್ಯರ್ಥಿ ಆಯ್ಕೆ ಕುರಿತು ಸಭೆ ಮಾಡ್ತಿದ್ದಾರೆ. ಕಾಂಗ್ರೆಸ್ ನಿಂದ ಯಾರು ಅಭ್ಯರ್ಥಿ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಡಿಕೆಶಿ ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಎಂದು ಮತ್ತೆ ಹೇಳಿದ್ದಾರೆ. ನಾನೇ ಚನ್ನಪಟ್ಟಣಕ್ಕೆ ಅಭ್ಯರ್ಥಿ. ನಾನು ಬಿ ಫಾರಂ ಬರೆಯೋನು. ಸಹಿ ಹಾಕೋನು ನಾನು. ಕ್ಯಾಂಡಿಡೇಟ್ ನಾನು. ಯಾರೇ ನಿಂತರೂ ನನಗೆ ವೋಟ್ ಹಾಕೋದು..ನಾನು ಇದನ್ನ ಆನ್ ರೆಕಾರ್ಡ್ ನಲ್ಲಿ ಹೇಳ್ತಿದೀನಿ ನಾನೇ ಅಭ್ಯರ್ಥಿ ಎಂದರು.. ಸಿಪಿ ಯೋಗೇಶ್ವರ್ ತಮ್ಮನ್ನ ಸಂಪರ್ಕಿಸಿದ್ದಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ ನನ್ನನ್ನೂ ಯಾರು ಸಂಪರ್ಕ ಮಾಡಿಲ್ಲ. ಅವರು ಈಗಾಗಲೇ ಮೈತ್ರಿ ಪಕ್ಷದಲ್ಲಿ ಇದ್ದಾರೆ. ನಾನು ಅವರ ಪಕ್ಷದ ಬಗ್ಗೆ ಮಾತನಾಡಲ್ಲ ಎಂದರು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.