ಬೆಂಗಳೂರು: ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪ ಹಿನ್ನೆಲೆಯಲ್ಲಿ ಅರಾಣ್ಯಾಧಿಕಾರಿಗಳು ಈಗಾಗಲೇ ಸೆಲೆಬ್ರಿಟಿಗಳು, ರಾಜಕಾರಣಿಗಳ ಮನೆ ಬಾಗಿಲನ್ನ ಬಡಿದು ಬಂದಿದ್ದಾರೆ. ಈ ಮಧ್ಯೆ ಕಾನೂನು ಪಾಲಿಸಬೇಕಾದ ಅರಣ್ಯಾಧಿಕಾರಿಗಳಿಂದಲೇ ಕಾನೂನು ಉಲ್ಲಂಘನೆ ಮಾಡಿರೋ ಆರೋಪ ಕೇಳಿ ಬಂದಿದೆ. ರೇಂಜ್ ಫಾರೆಸ್ಟ್ ಆಫೀಸರ್ ಆಗಿರುವ ಮುನಿರಾಜ್ ವಿರುದ್ಧ ಈ ಆರೋಪ ಕೇಳಿ ಬಂದಿದೆ. ಮುನಿರಾಜು ನಡೆ ಬೇಲಿಯೇ ಎದ್ದು ಹೊಲ ಮೇದಂತೆ ಎನ್ನುವಂತಾಗಿದೆ. ಮುನಿರಾಜು ವಿರುದ್ಧ ಸದ್ಯ ಸಾರ್ವಜನಿಕರು ದೂರು ನೀಡಿದ್ದಾರೆ. ಅರಣ್ಯ ಅಧಿಕಾರಿಯಾಗಿ ಹುಲಿ ಉಗುರು ಮಾದರಿ ಇರೋ ಲಾಕೇಟ್ ಹಾಕಿರುವ RFO ಮುನಿರಾಜ್ ವಿರುದ್ಧ ದೂರು ದಾಖಲಾಗಿದೆ. ವಲಯ ಅರಣ್ಯಾಧಿಕಾರಿ (RFO) ಮುನಿರಾಜ್ ಕೂಡ ಹುಲಿ ಉಗುರು ಧರಿಸಿರುವ ಕುರಿತು ದೂರು ದಾಖಲಾಗಿದೆ. ಮುನಿರಾಜ್ ಹುಲಿ ಉಗುರು ಮಾದರಿ ಇರೋ ಚೈನ್ ಹಾಕಿರೋ ಫೋಟೋ ವೈರಲ್ ಆಗಿದೆ. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಬಾಬು ಎಂಬುವರು ದೂರು ನೀಡಿದ್ದಾರೆ. ಇಮೇಲ್ ಮುಖಾಂತರ ಬಾಬಯ ದೂರು ನೀಡಿಲಾಗಿದೆ.