ಬೆಂಗಳೂರು: ಭ್ರಷ್ಟಾಚಾರ ಕಡಿವಾಣಕ್ಕೆ ಲೋಕಾಯಕ್ತ ಮಾಸ್ಟರ್ ಪ್ಲಾನ್ ಮಾಡ್ತಿದೆ. ಈ ಬಗ್ಗೆ ಚರ್ಚೆ ನಡೆಸಿಲು ಲೋಕಾಯುಕ್ತ ನ್ಯಾಯಮೂರ್ತಿ. ಬಿ.ಎಸ್. ಪಾಟೀಲ್ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ಇಲಾಖೆ ಸಿಬ್ಬಂದಿಯನ್ನ ನಿಯಂತ್ರಿಸುವಲ್ಲಿ ಹಿರಿಯ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಹಿನ್ನೆಲೆ ಎಲ್ಲಾ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಸಭೆಗೆ ನಡೆಸುವ ಲೋಕಾಯುಕ್ತರು ನಿರ್ಧಾರಿಸಿದ್ದಾರೆ. ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿಗಳು, ಆಯುಕ್ತರು ಹಾಗೂ ವಿಜಿಲೆನ್ಸ್ ಅಧಿಕಾರಿಗಳು ಕಡ್ಡಾಯ ಹಾಜರಿಗೆ ಸೂಚನೆ ನೀಡಲಾಗಿದೆ. ಇಲಾಖೆಗಳಿಗೆ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ರೆ ಸಾಲದು. ಅದು ಇಂಪ್ಲಿಮೆಂಟ್ ಆಗೋವರೆಗೂ ವಿಜಿಲೆನ್ಸ್ ಮಾಡದೇ ಅಧಿಕಾರಿಗಳ ನಿರ್ಲಕ್ಷ್ಯ ಮಾಡ್ತಿದ್ದಾರೆ. ಹೀಗಾಗಿ ಕೆಳ ಹಂತದ ಅಧಿಕಾರಿಗಳು ಕಡತಗಳ ವಿಲೇವಾರಿ ಮಾಡದೆ ವಿಳಂಬ ಮಾಡ್ತಿದ್ದಾರೆ. ಅಷ್ಟೇ ಅಲ್ಲದೇ ಕಡತಗಳ ವಿಲೇವಾರಿಗೆ ಹಣ ನೀಡದ ಹೊರತು ಫೈಲ್ ವಿಲೇವಾರಿ ಆಗ್ತಿಲ್ಲ. ಹೀಗಾಗಿ ಬಿಡುಗಡೆಯಾದ ಅನುದಾನದಲ್ಲಿ ಅರ್ಧಪಾಲು ಮಾತ್ರ ಫಲಾನುಭವಿಗಳಿಗೆ ತಲುಪುತ್ತಿದೆ. ಇನ್ನುಳಿದ ಪಾಲು ಕಮಿಷನ್ ಹಾಗೂ ಲಂಚದ ರೂಪದಲ್ಲಿ ಭ್ರಷ್ಟರ ಜೇಬು ಸೇರುತ್ತಿದೆ. ಇದಕ್ಕೆ ಕಾರಣ ಇಲಾಖೆಯಲ್ಲಿರೋ ವಿಜಿಲೆನ್ಸ್ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ವಿಜಿಲೆನ್ಸ್ ಡಿಪಾರ್ಟ್‌ಮೆಂಟ್‌ಗಳಿದ್ರೂ ಸರಿಯಾಗಿ ಕೆಲಸ ಮಾಡದ ಆರೋಪವಿದೆ. ಹೀಗಾಗಿ ವಿಜಿಲೆನ್ಸ್ ಡಿಪಾರ್ಟ್‌ಮೆಂಟ್‌ಗೆ ಬಿಸಿ ಮುಟ್ಟಿಸಲು ಲೋಕಾಯುಕ್ತರು ಪ್ಲ್ಯಾನ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ವಿಜಿಲೇನ್ಸ್ ಅಧಿಕಾರಿಗಳ ಜೊತೆ ಸಭೆಗೆ ಲೋಕಾಯುಕ್ತರ ನಿರ್ಧಾರ ಮಾಡಿದ್ದಾರೆ.ಅಧಿಕಾರಿಗಳ ಆಟಾಟೋಪಗಳ ಮೇಲೆ ನಿಗಾ ಇಡಲು ಈ ಸಭೆಯಲ್ಕಿ ಸೂಚನೆ ಲೋಕಾಯುಕ್ತರು ಸೂಚನೆ ನೀಡಿದ್ದಾರೆ.