ಬೆಂಗಳೂರು: ನಗರದಲ್ಲಿ ತಡ ರಾತ್ರಿ ಹುಸಿ ಬಾಂಬ್ ಬೆದರಿಕೆ ಬಂದಿದ್ದು ಸಾಕಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು. ಪ್ರತಿಷ್ಟಿತ ರೆಸ್ಟೋರೆಂಟ್ ಆಗಿರೋ ಪಾಸ್ತ ಸ್ಟ್ರೀಟ್‌ಗೆ ಹುಸಿ ಬಾಂಬ್ ಬೆದರಿಕೆ ಬಂದಿದ್ದು ಪೊಲೀಸರು ಮತ್ತು ರೆಸ್ಟೋರೆಂಟ್ ಮಾಲೀಕರು ಆತಂಕ್ಕಿಡಾಗಿದ್ದರು.
ತನಿಖೆಯಲ್ಲಿ ಸತ್ಯ ಬಯಲಾಗಿದ್ದು, ಸ್ಯಾಲರಿ ಕೊಟ್ಟಿಲ್ಲ ಎಂದು ಕುಡಿದು ಉದ್ಯೋಗಿ ಬಾಂಬ್ ಬೆದರಿಕೆ ಮಾಡಿರೋದು ಪತ್ತೆಯಾಗಿದೆ. ಮಹದೇವಪುರ ಠಾಣಾ ವ್ಯಾಪ್ತಿಯ ಪಾಸ್ತಾ ಸ್ಟ್ರೀಟ್ ರೆಸ್ಟೋರೆಂಟ್ ಹುಸಿ ಬಾಂಬ್ ಬೆದರಿಕೆ ಬಂದಿದ್ದು, ಹುಸಿ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿ ವೇಲುನನ್ನ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ.
ಬಾಂಬ್ ಶೀಘ್ರವೇ ಬ್ಲಾಸ್ಟ್ ಆಗುತ್ತೆ ಎಂದು ಬೆದರಿಕೆ ಕರೆ ಮಾಡಿದ್ದ ರೆಸ್ಟೋರೆಂಟ್ ಉದ್ಯೋಗಿ ವೇಲು ಇಂದಿರಾನಗರ ಬ್ರಾಂಚ್‌ನಲ್ಲಿ ಕೆಲಸ ಮಾಡುತ್ತಿದ್ದ. ರಾತ್ರಿ ಪೂರ್ತಿ ರೆಸ್ಟೋರೆಂಟ್ ಪರಿಶೀಲನೆ ನಡೆಸಿದ್ದ ಪೊಲೀಸರು ಬಳಿಕ ವೇಲುನನ್ನು ವಶಕ್ಕೆ ಪಡೆದಾಗ ಹುಸಿ ಬಾಂಬ್ ಬಾಂಬ್ ಬೆದರಿಕೆ ಎಂಬುದು ಪತ್ತೆಯಾಗಿದೆ. ಸದ್ಯ ಘಟನೆ ಕುರಿತು ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.