ಬೆಂಗಳೂರು: ಯಶ್ ಅಭಿನಯದ ಫ್ಯಾನ್ ಇಂಡಿಯಾ ಸಿನಿಮಾ ಟಾಕ್ಸಿಕ್ ಚಿತ್ರತಂಡಕ್ಕೆ ಎದುರಾಗುತ್ತಾ ಸಂಕಷ್ಟ ? ಚಿತ್ರೀಕರಣಕ್ಕಾಗಿ ಮರ ಕಡಿದ ಆರೋಪ ಹಿನ್ನೆಲೆ ಎಫ್ ಐಆರ್ ದಾಖಲಾಗಿದೆ.
ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶದ ಮೇರೆ FIR ದಾಖಲಾಗಿದೆ. ಕೆವಿಎನ್ ಮಾನ್ಸಟರ್ ಮೈಂಡ್ ಕ್ರಿಯೇಷನ್ಸ್ , ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ಮತ್ತು ಹೆಚ್ ಎಂಟಿ ಲಿಮಿಟೆಡ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಅರಣ್ಯ ಕಾಯ್ದೆಯ ಪ್ರಕಾರ ಎಫ್ ಐಆರ್ ದಾಖಲು ಮಾಡಲಾಗಿದೆ. ಹೆಚ್ ಎಂಟಿ ಗ್ರೌಂಡ್ ನಲ್ಲಿ ಚಿತ್ರಿಕರಣಕ್ಕಾಗಿ ಸೆಟ್ ಹಾಕಿದ್ದ ಚಿತ್ರತಂಡ,ಸೆಟ್ ಹಾಕಲು ನೂರಾರು ಮರ ಕಡಿದಿದ್ದ ಆರೋಪದ ಮೇಲೆ FIR ದಾಖಲಾಗಿದೆ.
ಮರ ಕಡಿದ ಸ್ಥಳಕ್ಕೆ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಚಿತ್ರತಂಡ,ಕೆನರಾಬ್ಯಾಂಕ್,ಹೆಚ್ ಎಂಟಿಗೆ ನೊಟೀಸ್ ನೀಡಿ ಅಗತ್ಯ ಕ್ರಮಕ್ಕೆ ಸೂಚಿಸಿದ್ದ ಈಶ್ವರ್ ಖಂಡ್ರೆ. ಬಳಿಕ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಕೋರ್ಟ್ ಆದೇಶದ ಮೇರೆಗೆ ಎಫ್ ಐಆರ್ ದಾಖಲು ಮಾಡಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಈಶ್ವರ್ ಖಂಡ್ರೆ,ನಾವು ಯಾವುದನ್ನೂ ಸುಮ್ಮನೆ ಬಿಡಲ್ಲ, ಮಾಜಿಸ್ಟ್ರೇಟ್ ಕೋರ್ಟ್ ಆದೇಶವಿದೆ. ಅದರ ಪ್ರಕಾರ ಎಫ್ ಐಆರ್ ದಾಖಲು ಮಾಡಲಾಗಿದೆ ಎಂದಿದ್ದಾರೆ.