ಬೆಂಗಳೂರು: ಬೆಂಗಳೂರಿನಲ್ಲಿ ಮತ್ತಷ್ಟು ಮೆಟ್ರೋ ವಿಸ್ತರಣೆಗೆ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. 15,600 ಕೋಟಿ ರೂಪಾಯಿ ಮೌಲ್ಯದ ಮೆಟ್ರೋ ಹಂತ-3 ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಇದು ಜೆಪಿ ನಗರ 4ನೇ ಹಂತ, ಹೊಸಹಳ್ಳಿ ಮತ್ತು ಕಡಬಗೆರೆ ಸಂಪರ್ಕಿಸುವ ಮಾರ್ಗವಾಗಿರುತ್ತದೆ. 31 ನಿಲ್ದಾಣಗಳನ್ನೊಳಗೊಂಡ ಹಂತ-3ರ 44 ಕಿ.ಮೀ ಉದ್ದದ ಮಾರ್ಗ ಇರಲಿದೆ. ಈ ವಿಚಾರವನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಆದ್ಯತೆಯ ಮೇರೆಗೆ ಈ ಯೋಜನೆಯನ್ನು ತ್ವರಿತಗೊಳಿಸಿದ್ದಕ್ಕಾಗಿ ನಿರ್ಮಲಾ ಸೀತಾರಾಮನ್ ಅವರಿಗೆ ಕೃತಜ್ಞತೆಗಳು’ ಎಂದು ತಿಳಿಸಿದ್ದಾರೆ.