ಬೆಂಗಳೂರು: ಮೆಡಿಕಲ್ ಸೀಟು ಕೊಡಿಸೋದಾಗಿ ವಿದ್ಯಾರ್ಥಿಗೆ ಐವರು ಅಧಿಕಾರಿಗಳ ಹೆಸರಲ್ಲಿ ವಂಚಿಸಿರೋ ಘಟನೆ ಹೈಗ್ರೌಂಡ್ ಠಾಣೆಯಲ್ಲಿ ವರದಿಯಾಗಿದೆ. ನಗರದ ಸರ್ಕಾರಿ ಕಚೇರಿ ಮುಂಭಾಗಕ್ಕೆ ಕರೆಸಿ, ಮೈಸೂರು ಮೂಲದ ಮೆಡಿಕಲ್ ವಿದ್ಯಾರ್ಥಿಗೆ ಲಕ್ಷ ಲಕ್ಷ ದೋಖಾ ಮಾಡಲಾಗಿದೆ. ಮೆಡಿಕಲ್ ಸೀಟ್ ಕೊಡಿಸೋದಾಗಿ ಕಲಾ ಮಂಜುನಾಥ್ ಎಂಬುವವರ ಬಳಿ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಮಾಡಿದ್ದು, ನಗರದ ಕನ್ನಿಂಗ್ ಹ್ಯಾಮ್ ರಸ್ತೆಯ ಸರ್ಕಾರಿ ಕಚೇರಿಗೆ ಕರೆಸಿದ್ದ ಆರೋಪಿಗಳು ನಕಲಿ ಸಂಸ್ಥೆ ಹೆಸರು ಹೇಳಿ ವಂಚಿಸಿದ್ದಾರೆ. ಮೆಡಿಕಲ್ ಸೀಟ್ ಗಾಗಿ ತಯಾರಿ ನಡೆಸಿದ್ದ ವಿದ್ಯಾರ್ಥಿ ಗೆ ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ಬಂದಿರಲಿಲ್ಲ. ಈ ವೇಳೆ ವಿದ್ಯಾರ್ಥಿ ಅಣ್ಣನ ಮೊಬೈಲ್ ಗೆ ಅನಾಮಿಕ ಮೆಸೇಜ್ ಬಂದಿದ್ದು, ಮೆಸೇಜ್ ಬಂದ ಕೆಲ ಹೊತ್ತಲ್ಲೇ ಫೋನ್ ಕೂಡಾ ಮಾಡಿದ್ದಾರೆ. ನಾಲ್ಕೈದು ವರ್ಷಗಳಿಂದ ಮೆಡಿಕಲ್ ಸೀಟ್ ಕೊಡಿಸೋದಾಗಿ ಹೇಳಿ ದಾವಣಗೆರೆಯಲ್ಲಿ ಸೀಟ್ ಕೊಡಿಸುತ್ತೇವೆ. ಮೆಡಿಕಲ್ ಸೀಟ್ ಗೆ 60 ಲಕ್ಷ ಆಗುತ್ತೆ ಎಂದು ಡೀಲ್ ಮಾತಾಡಿದ್ರು. ಕನ್ನಿಂಗ್ ಹ್ಯಾಮ್ ರಸ್ತೆಯ ಅದೊಂದು ಕಚೇರಿಗೆ ಕರೆಯಿಸಿಕೊಂಡು ಇದು ನಮ್ಮ ಕಚೇರಿ ಅಂತಾ ತೋರಿಸಿದ್ರು. ಆರೋಪಿಗಳಾದ ರೋಶಿನಿ,ಆಶುತೋಷ್, ನಿಖಿಲ್ ಎಂಬುವವರನ್ನ ಖಾಸಗಿ ಕಾಲೇಜಿನ ಕಾರ್ಯದರ್ಶಿ ಎಂದು ಯೋಗೇಶ್ ಎಂಬುವವರು ಪರಿಚಯ ಮಾಡಿಸಿದ್ರು. ನಂತರ ಇವರು ನಮ್ಮ ಬಾಸ್ ಅಂತಾ ಮಾನ ಗುಪ್ಪ ಅನ್ನೋ ವ್ಯಕ್ತಿಯನ್ನು ಪರಿಚಯ ಮಾಡಿಸಿ ಸರ್ಕಾರಿ ಕೋಟಾದಲ್ಲೆ ಸೀಟ್ ಸಿಗುತ್ತೆ ಅಂತ ನಂಬಿಸಿ ಹಂತ ಹಂತವಾಗಿ ಹತ್ತೂವರೆ ಲಕ್ಷ ಪಡೆದು ಎಸ್ಕೇಪ್ ಆಗಿದ್ದಾರೆ. ಮೋಸ ಹೋದ ನಂತರ ಕಚೇರಿಗೆ ಹೋಗಿ ನೋಡಿದಾಗ ಅದು ನಕಲಿ ಅನ್ನೋದು ಗೊತ್ತಾಗಿದೆ. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಐವರು ಆರೋಪಿಗಳನ್ನ ಪೊಲೀಸ್ರು ಬಂಧಿಸಿದ್ದಾರೆ.