ಬೆಂಗಳೂರು “ರಾಜ – ಮಹಾರಾಜ” ಜೋಡುಕರೆ ಕಂಬಳ ಕೂಟದ ಫಲಿತಾoಶ

ಬೆಂಗಳೂರು : ಇತಿಹಾಸದಲ್ಲೇ ಮೊದಲ ಬಾರಿ ಕರಾವಳಿಯನ್ನು ಹೊರತುಪಡಿಸಿ ನಡೆದ ಅದ್ಧೂರಿ ಬೆಂಗಳೂರು ಕಂಬಳ ಭಾನುವಾರ ರಾತ್ರಿ 2 ಗಂಟೆ ಸುಮಾರಿಗೆ ಮುಕ್ತಾಯಗೊಂಡಿದೆ. ನವೆಂಬರ್‌ 25ರ ಬೆಳಗ್ಗೆ 11 ಗಂಟೆಗೆ ಆರಂಭವಾದ ಕೋಣಗಳ ಓಟ ನವೆಂಬರ್‌ 26ರ ರಾತ್ರಿ 2 ಗಂಟೆಗೆ ಅಂತ್ಯಗೊಂಡಿದ್ದು, ಫಲಿತಾಂಶ ಪ್ರಕಟಗೊಂಡಿದೆ.

159ರ ಜೋಡಿ ಕೋಣಗಳು ಭಾಗವಹಿಸಿದ ಈ ಮಹಾ ಕೂಟದಲ್ಲಿ (ರಾಜ-ಮಹಾರಾಜ ಕಂಬಳ) ಅತ್ಯಂತ ಪ್ರತಿಷ್ಠೆಯ ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಅವರ ಸಿ ಕೋಣಗಳು ಪ್ರಥಮ ಬಹುಮಾನ ಪಡೆದರೆ ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ಅವರ ಕೋಣಗಳು ದ್ವಿತೀಯ ಬಹುಮಾನ ಪಡೆದಿವೆ. ಶ್ರೀಕಾಂತ್‌ ಭಟ್‌ ಅವರ ಕೋಣಗಳನ್ನು ಬಂಬ್ರಾಣ ಬೈಲು ವಂದಿತ್‌ ಶೆಟ್ಟಿ ಅವರು ಓಡಿಸಿದ್ದಾರೆ. ಈ ಕೋಣಗಳು 9.51 ಸೆಕೆಂಡ್‌ನಲ್ಲಿ ಓಟವನ್ನು ಮುಗಿಸಿವೆ. ಇದು ಕೂಟ ದಾಖಲೆಯಾಗಿದೆ ಮತ್ತು ಈ ಹಿಂದಿನ ದಾಖಲೆಯನ್ನು ಸರಿಗಟ್ಟಿದಂತಾಗಿದೆ. ಈ ಹಿಂದೆ ಬಜಗೋಳಿ ಜೋಗಿಬೆಟ್ಟು ನಿಶಾಂತ್‌ ಶೆಟ್ಟಿ ಅವರು 9.51 ಸೆಕೆಂಡ್‌ನಲ್ಲಿ ಓಟವನ್ನು ಮುಗಿಸಿದ್ದರು.

ಅಂತಿಮ ಫಲಿತಾಂಶ

Advertisement

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : 159 ಕನೆಹಲಗೆ: 07 ಜೊತೆ ಅಡ್ಡಹಲಗೆ: 06 ಜೊತೆ ಹಗ್ಗ ಹಿರಿಯ: 21 ಜೊತೆ ನೇಗಿಲು ಹಿರಿಯ: 32 ಜೊತೆ ಹಗ್ಗ ಕಿರಿಯ: 31 ಜೊತೆ ನೇಗಿಲು ಕಿರಿಯ: 62 ಜೊತೆ

ಕನೆಹಲಗೆ ವಿಭಾಗ

ಬೊಳ್ಳಂಬಳ್ಳಿ ಶ್ರೀರಾಮ ಚೈತ್ರ ಪರಮೇಶ್ವರ ಭಟ್ “ಬಿ” (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ) ಹಲಗೆ ಮುಟ್ಟಿದವರು: ಉಲ್ಲೂರು ಕಂದಾವರ ಗಣೇಶ್

ಅಡ್ಡ ಹಲಗೆ ವಿಭಾಗ

ಪ್ರಥಮ: ಎಸ್.ಎಮ್.ಎಸ್ ಫ್ಯಾಮಿಲಿ ಬೆಂಗಳೂರು ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ದ್ವಿತೀಯ: ಬೋಳಾರ ತ್ರಿಶಾಲ್ ಕೆ ಪೂಜಾರಿ ಹಲಗೆ ಮುಟ್ಟಿದವರು: ಸಾವ್ಯ ಗಂಗಯ್ಯ ಪೂಜಾರಿ

ಹಗ್ಗ ಹಿರಿಯ ವಿಭಾಗ

ಪ್ರಥಮ: ನಂದಳಿಕೆ ಶ್ರೀಕಾಂತ್ ಭಟ್ “ಸಿ” ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ಓಡಿಸಿದವರು: ಭಟ್ಕಳ ಶಂಕರ್ ನಾಯ್ಕ

ಹಗ್ಗ ಕಿರಿಯ ವಿಭಾಗ

ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ ಓಡಿಸಿದವರು: ಮಾಸ್ತಿ ಕಟ್ಟೆ ಸ್ವರೂಪ್

ದ್ವಿತೀಯ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್ “ಎ” ಓಡಿಸಿದವರು: ಅತ್ತೂರು ಕೋಡಂಗೆ ಸುಧೀರ್ ಸಾಲ್ಯಾನ್

ನೇಗಿಲು ಹಿರಿಯ ವಿಭಾಗ

ಪ್ರಥಮ: ಬಂಗಾಡಿ ಪರಂಬೇಲು ನಾರಾಯಣ ಮಲೆಕುಡಿಯ ಓಡಿಸಿದವರು: ಸರಪಾಡಿ ಧನಂಜಯ ಗೌಡ

ದ್ವಿತೀಯ: ಮಾಳ ಆನಂದ ನಿಲಯ ಶೇಖರ ಎ ಶೆಟ್ಟಿ ಓಡಿಸಿದವರು: ಪಟ್ಟೆ ಗುರು ಚರಣ್

ನೇಗಿಲು ಕಿರಿಯ ವಿಭಾಗ

ಪ್ರಥಮ: ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ

ದ್ವಿತೀಯ: ಎರ್ಮಾಳ್ ಪುಚ್ಚೊಟ್ಟುಬೀಡು ಬಾಲಚಂದ್ರ ಶೆಟ್ಟಿ ಓಡಿಸಿದವರು: ಬೈಂದೂರು ವಿವೇಕ್ ಪೂಜಾರಿ

ಗೆದ್ದವರಿಗೆ ಬಹುಮಾನ ಎಷ್ಟು?

ಈ ಕೂಟದಲ್ಲಿ ಪ್ರಥಮ ಪ್ರಶಸ್ತಿ ಗೆದ್ದವರಿಗೆ 16 ಪವನ್‌ ಚಿನ್ನ ಮತ್ತು 1 ಲಕ್ಷ ರೂ. ನಗದು ಬಹುಮಾನ ನೀಡಲಾಗಿದೆ. ದ್ವಿತೀಯ ಪ್ರಶಸ್ತಿ ಗೆದ್ದವರಿಗೆ 8 ಪವನ್‌ ಚಿನ್ನ ಮತ್ತು 50 ಸಾವಿರ ರೂ. ಬಹುಮಾನ ನೀಡಲಾಗಿದೆ. ಮೂರನೇ ಬಹುಮಾನವಾಗಿ 4 ಪವನ್‌ ಚಿನ್ನ ಮತ್ತು 25 ಸಾವಿರ ರೂ. ನೀಡಲಾಗುತ್ತದೆ ಎಂದು ಘೋಷಿಸಲಾಗಿತ್ತು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement