ಬೆಂಗಳೂರು: ಪೊಲೀಸರು ಹೊಸ ಹೆಲ್ಪ್ ಲೈನ್ ಶುರುಮಾಡಿದ್ದಾರೆ. ಈ ಹೆಲ್ಪ್ ಲೈನ್‌ನಲ್ಲಿ ರಾತ್ರಿ ಹತ್ತು ಗಂಟೆಯಿಂದ ಮುಂಜಾನೆ ಆರು ಗಂಟೆ ವರೆಗೆ ಹೆಲ್ಪ್ ಲೈನ್ ನಂಬರ್‌ಗೆ ಕರೆ ಮಾಡಿದ್ರೆ ಮನೆಗೆ ಡ್ರಾಪ್ ಮಾಡ್ತಾರೆ ಅನ್ನೋ ರೀತಿ ಮೆಸೇಜ್ ಒಂದು ವೈರಲ್ ಆಗ್ತಿದೆ. ಜನರಿಗೆ ನಂಬಿಕೆ ಬರಲಿ ಅನ್ನೋ ಕಾರಣಕ್ಕೆ 1091 ಮತ್ತು 7837019555 ನಂಬರ್ ಹಾಕಿ ವೈರಲ್ ಮಾಡಿದ್ದಾರೆ. ಈ ವಿಚಾರವಾಗಿ ಕಮಿಷನರ್ ಕಚೇರಿ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಇದೊಂದು ಫೇಕ್ ಮೆಸೇಜ್ ಆಗಿದ್ದು, ತುರ್ತು ಸಂದರ್ಭದಲ್ಲಿ 112ಗೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ. ಸೈಬರ್ ವಂಚರು ಈ ರೀತಿ ಮೆಸೇಜ್ ವೈರಲ್ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮೆಸೇಜ್‌ನಲ್ಲಿರೋ ನಂಬರ್‌ಗೆ ಕರೆ ಮಾಡಿ ಓಟಿಪಿ ಹಾಗೂ ಇನ್ನಿತರ ಮಾಹಿತಿ ಕಳವು ಮಾಡುವ ಸಂಚು ಇದಾಗಿರಬಹುದು ಹಾಗಾಗಿ ಈ ರೀತಿ ಮೆಸೇಜ್‌ಗೆ ಯಾರೂ ಕೂಡ ಸ್ಪಂದನೆ ನೀಡಬಾರದು.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ