ಬೆಂಗಳೂರು: ದಾವಣಗೆರೆಯಲ್ಲಿ ಒಂಬತ್ತು ತಿಂಗಳ ಹಿಂದೆ ನಡೆದ ಅದೊಂದು ಘಟನೆ ರಾಜಕೀಯ ವಲಯದಲ್ಲಿ ತಲ್ಲಣ ಎಬ್ಬಿಸಿತ್ತು. ಇದು ಅಪಘಾತವೋ? ಕೊಲೆಯೋ ಅನ್ನೋ ಅನುಮಾನದಲ್ಲಿ ಮೂಡಿಸಿತ್ತು. ಆದರೆ ಸುಧೀರ್ಘ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಫೈನಲ್ ರಿಪೋರ್ಟ್ ಸಲ್ಲಿಕೆ ಮಾಡಿದೆ. ದಾವಣಗೆರೆಯ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ವರದಿ ಸಲ್ಲಿಕೆ ಮಾಡಿದ್ದು, ಇದು ಕೊಲೆಯಿಂದ ಸಂಭವಿಸಿರೋ ಸಾವಲ್ಲ. ಇದು ಅಪಘಾತದಿಂದ ಸಂಭವಿಸಿರೋ ಸಾವು ಎಂದು ಸಿಐಡಿ ತಮ್ಮ ವರದಿಯಲ್ಲಿ ಉಲ್ಲೇಖಿಸಿದೆ. ಹೊನ್ನಾಳಿಯ ಮಾಜಿ ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಅಸ್ವಾಭಾವಿಕವಾಗಿ ಸಾವನ್ನಪ್ಪಿದ್ದರು. ಆಗ ರೇಣುಕಾಚಾರ್ಯ ಇದೊಂದು ಕೊಲೆ, ಉದ್ದೇಶ ಪೂರಕ ಘಟನೆಯಂತ ಹೆಚ್ಚಿನ ತನಿಖೆಗೆ ಕೇಳಿ ಪ್ರಕರಣ ಸಿಐಡಿ ನೀಡಲಾಗಿತ್ತು. ಬಳಿಕ ಸುದೀರ್ಘ ತನಿಖೆ ನಡೆಸಿದ ಸಿಐಡಿ ಪ್ರಕರಣದ ಕ್ಲೋಸರ್ ರಿಪೋರ್ಟ್ ಸಲ್ಲಿಕೆಯನ್ನು ಮಾಡಿದೆ. ಎಫ್‌ಎಸ್‌ಎಲ್ ಮತ್ತು ತಾಂತ್ರಿಕ ಸಾಕ್ಷ್ಯಗಳು ಇದೊಂದು ಅಪಘಾತ ಎಂದು ವರದಿ ನೀಡಿದ್ದು, ಪ್ರಕರಣ ಸ್ಪಷ್ಟ ಕಾರಣದೊಂದಿಗೆ ಮುಕ್ತಾಯಗೊಳಿಸಿದೆ. ಎಫ್‌ಎಸ್‌ಎಲ್ ವರದಿಯಲ್ಲಿ ಇರುವ ಅಂಶಗಳನ್ನ ಗಮನಿಸೋದಾದ್ರೆ. ನೀರಿಗೆ ಕಾರು ಬಿದ್ದಾಗ ಗಾಡಿ TOP ಗೇರ್ ಅಲ್ಲಿ ಇದೆ ( ವಾಹನವನ್ನು ಗೇರ್ ಅಲ್ಲಿ ಹಾಕಿ ನೀರಿನ ಒಳಗೆ ತಳ್ಳಲು ಸಾಧ್ಯವಿಲ್ಲ)
* 120- 130 ಸ್ವೀಡ್ ಮೀಟರ್ ಅಲ್ಲಿ ಗಾಡಿ ಸ್ಪೀಡ್ ಮೀಟರ್ ಲಾಕ್ ಆಗಿದೆ
* ನಾಲ್ಕು ಜಾಗದಲ್ಲಿ ಗಾಡಿ ಉಜ್ಜಿಕೊಂಡು ಬಂದಿದೆ
*ಗಾಡಿ ಹೊಡೆದು ಹಾರಿದ ರಭಸಕ್ಕೆ ಸೆನ್ಸರ್ ಗಾಡಿಯಾಗಿರೋದ್ರಿಂದ ಇಂಪ್ಯಾಕ್ಟ್ ಗೆ ಏರ್ ಬ್ಯಾಗ್ ಓಪನ್ ಆಗಿದೆ
*ಹಿಂಬದಿ ಸೀಟ್ ಅಲ್ಲಿ ದೇಹ ಸಿಲುಕಲು ಕಾರಣ ಮುಂದೆ ಇದ್ದವ ಹಿಂದೆ ಬರಲು ಪ್ರಯತ್ನ
*ಮೊದಲು ಒಳಗಡೆಯಿಂದ ಮುಂದಿನ ಗಾಜು ಒಡೆಯಲು ಯತ್ನಿಸಿರೋ ಬಗ್ಗೆ ಅನುಮಾನ ಪೊಲೀಸರ ಟೆಕ್ನಿಕಲ್ ಮಾಹಿತಿ ಪ್ರಕಾರ ಕೇವಲ 7 ನಿಮಿಷಕ್ಕೆ 6 ಕಿಮೀ ಹಳ್ಳಿ ರಸ್ತೆಯಲ್ಲಿ ಕ್ರಮಿಸಲು ಅತಿವೇಗ 12:06 ತನಕ ವಾಟ್ಸಾಫ್ ಆಕ್ಟೀವ್ ಇತ್ತು 12:06 ಆದ 68 ಸೆಕೆಂಡ್ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ ನೀರಿನ ಒಳಗೆ ಸ್ವಿಚ್ ಆಫ್ ಆದ ಹಿನ್ನೆಲೆ ಸರಿಯಾದ ಲೊಕೇಷನ್ ಟ್ರೇಸ್ ಆಗಿಲ್ಲ ಮರಣೋತ್ತರ ಪರೀಕ್ಷಾ ವರದಿ
*ಉಸಿರುಗಟ್ಟಿ ಸಾವನ್ನಪ್ಪಿರೋದು ಸ್ಪಷ್ಟ
*ನೀರಿನಲ್ಲಿ ಉಸಿರುಗಟ್ಟಿರೋ ಬಗ್ಗೆ ಮಾಹಿತಿ
*ದೇಹದ ಮೇಲಿನ ಗಾಯಗಳು ಅಪಘಾತದಿಂದ ಸಂಭವಿಸಿರೋ ಸಾಧ್ಯತೆ