ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ದೇಶದ ಅತಿ ಎತ್ತರದ ಸ್ಕೈಡೆಕ್ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಬೆಂಗಳೂರಲ್ಲಿ 250 ಮೀಟರ್ ಎತ್ತರದ ಆಕಾಶ ಗೋಪುರ ( ಸ್ಕೈಡೆಕ್) ನಿರ್ಮಿಸಲು ತಾಂತ್ರಿಕ ಅನುಮೋದನೆ ನೀಡಿದೆ. ಸುಮಾರು 500 ಕೋಟಿ ವೆಚ್ಚದ ಸ್ಕೈ ಡೆಕ್ ನಿರ್ಮಾಣವಾಗಲಿದೆ. ಆದ್ರೆ ಎಲ್ಲಿ ಬೆಂಗಳೂರಲ್ಲಿ ನಿರ್ಮಾಣ ಮಾಡಬೇಕು ಎಂಬುದನ್ನ ಇನ್ನೂ ಸ್ಥಳ ನಿಗದಿ ಪಡಿಸಿಲ್ಲ..ಸ್ಕೈಡೆಕ್ ನಿರ್ಮಾಣವಾದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರನ್ನ ಬಾನೆತ್ತರದಲ್ಲಿ ನಿಂತು ನೋಡುವ ಅವಕಾಶ ಸಿಗಲಿದೆ. ಚೀನಾದ ಶಾಂಘೈ ಟವರ್ಸ್ ಪ್ರೇರಣೆಯಾಗಿಟ್ಟುಕೊಂಡು ಬೆಂಗಳೂರಲ್ಲಿ ಸ್ಕೈ ಡೆಕ್ ನಿರ್ಮಾಣ ಮಾಡುತ್ತಿದೆ.
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ