ಬೆಳಗಾವಿ : ಬೆಳಗಾವಿ ಮಹಾನಗರ ಪೊಲೀಸರು, ಐಟಿ ಅಧಿಕಾರಿಯನ್ನು ಸಿನಿಮೀಯ ರೀತಿ ಪ್ಲ್ಯಾನ್ ಮಾಡಿ ಬಂಧಿಸಿದ ಘಟನೆ ನಡೆದಿದೆ.
ಬಲೆಗೆ ಬಿದ್ದ ಅಧಿಕಾರಿ ಅವಿನಾಶ ಟೊನಪೆ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಐಟಿ ಅಧಿಕಾರಿ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಚಿನ್ನಾಭರಣ ಅಂಗಡಿ ಮಾಲೀಕ ಪರುಶುರಾಮ ಬಂಕಾಪುರ ಎಂಬುವರಿಗೆ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದರು.
ಇದನ್ನೂ ಓದಿ : ನಿಮ್ಮ ಸ್ಮಾರ್ಟ್ ಫೋನ್ ನೀರಲ್ಲಿ ಬಿದ್ದರೆ ಹೀಗೆ ಮಾಡಿ..!
ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಬೆಳಗಾವಿ ಮಾರ್ಕೆಟ್ ವಿಭಾಗದ ಎಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಚಿನ್ನಾಭರಣ ಅಂಗಡಿ ಮಾಲೀಕನಿಗೆ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ ಐಟಿ ಅಧಿಕಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಿಪ್ಪಾಣಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಐಟಿ ಅಧಿಕಾರಿ ಅವಿನಾಶ ಟೊನಪೆ ಚಿನ್ನದ ಅಂಗಡಿ ಮಾಲೀಕನಿಗೆ 10 ಲಕ್ಷ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಇತ್ತೀಚೆಗಷ್ಟೇ ಐಟಿ ಅಧಿಕಾರಿಗಳು ಉದ್ಯಮಿ, ಚಿನ್ನಾಭರಣ ಅಂಗಡಿ ಮಾಲೀಕರ ಅಂಗಡಿಗೆ ಹೋಗಿ ಪರಿಶೀಲನೆ ನಡೆಸಿದ್ದರು. ಅದಾದ ಬಳಿಕ ಐಟಿ ಅಧಿಕಾರಿ ಅವಿನಾಶ ಟೊನಪೆ ಅಂಗಡಿ ಮಾಲೀಕರಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಇದರಿಂದ ಉದ್ಯಮಿ ಅನಿವಾರ್ಯವಾಗಿ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದು, ಇದರಂತೆ ಇಂದು 40 ಸಾವಿರ ರೂಪಾಯಿ ಹಣ ಸ್ವೀಕರಿಸಲು ಬಂದ ಐಟಿ ಅಧಿಕಾರಿಯನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.