ಬೆಳಿಗ್ಗಿನ ತಿಂಡಿಗೆ ಪುಲಾವ್ ಹೇಳಿ ಮಾಡಿಸಿದ್ದು. ರೈಸ್ ಬಾತ್ ಇಷ್ಟಪಡುವವರು ಒಮ್ಮೆ ಈ ಕಾರ್ನ್ ಪುಲಾವ್ ಮಾಡಿಕೊಂಡು ಸವಿದರೆ ಮತ್ತೆ ಮತ್ತೆ ಮಾಡಿಕೊಂಡು ತಿನ್ನಬೇಕು ಅನಿಸುತ್ತೆ.
ಮಾಡುವ ವಿಧಾನ ಇಲ್ಲಿದೆ ನೋಡಿ.
250 ಗ್ರಾಂ ಬಾಸುಮತಿ ಅಕ್ಕಿ, 80 ಗ್ರಾಂ ಕಾರ್ನ್, 2 ಟೀ ಸ್ಪೂನ್-ತೆಂಗಿನೆಣ್ಣೆ, 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು, 1 ಟೀ ಸ್ಪೂನ್-ಶುಂಠಿ ಬೆಳ್ಳುಳ್ಳಿ ಪೇಸ್ಟ್, 1 ಟೀ ಸ್ಪೂನ್-ಉಪ್ಪು, 4-ಹಸಿಮೆಣಸು, ಜೀರಿಗೆ-1 ಚಮಚ, ½ ಟೀ ಸ್ಪೂನ್-ಕಾಳುಮೆಣಸು, 8-ಲವಂಗ, 2 ಕಪ್-ಬಿಸಿನೀರು, ಕೊತ್ತಂಬರಿಸೊಪ್ಪು-3 ಟೇಬಲ್ ಚಮಚ, 2 ಟೀ ಸ್ಪೂನ್-ಲಿಂಬೆಹಣ್ಣಿನ ರಸ, ತೆಂಗಿನಕಾಯಿ ತುರಿ ಸ್ವಲ್ಪ.
ಮಾಡುವ ವಿಧಾನ: ಮೊದಲಿಗೆ ಬಾಸುಮತಿ ಅಕ್ಕಿಯನ್ನು ಅರ್ಧ ಗಂಟೆ ನೆನೆಸಿಡಿ. ನಂತರ ಒಂದು ಮಿಕ್ಸಿ ಜಾರಿಗೆ ಸ್ವಲ್ಪ ತೆಂಗಿನತುರಿ, ಹಸಿಮೆಣಸು, ಕೊತ್ತಂಬರಿಸೊಪ್ಪನ್ನು ನಯವಾಗಿ ಪೇಸ್ಟ್ ಮಾಡಿಕೊಳ್ಳಿ. ನಂತರ ಒಂದು ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ ತೆಂಗಿನೆಣ್ಣೆ ಹಾಕಿ. ನಂತರ ಅದಕ್ಕೆ ಜೀರಿಗೆ ಹಾಕಿ, ಲವಂಗ, ಪಲಾವ್ ಎಲೆ, ಕಾಳುಮೆಣಸು ಹಾಕಿ. ನಂತರ ಈರುಳ್ಳಿ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ2 ನಿಮಿಷ ಕೈಯಾಡಿಸಿ. ಅದಾದ ನಂತರ ರುಬ್ಬಿಕೊಂಡ ಮಿಶ್ರಣವನ್ನು ಹಾಕಿ 5 ನಿಮಿಷ ಕೈಯಾಡಿಸಿ. ನಂತರ ಕಾರ್ನ್ ಸೇರಿಸಿ ಮಿಶ್ರಣ ಮಾಡಿ. ನಂತರ 2 ಕಪ್ ನೀರು ಸೇರಿಸಿ ಕುದಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಬಾಸುಮತಿ ಅಕ್ಕಿಯನ್ನು ಹಾಕಿ. ಅದರ ಮೇಲೆ ಕೊತ್ತಂಬರಿ ಸೊಪ್ಪು ಹಾಕಿ, ಲಿಂಬೆಹಣ್ಣಿನ ರಸ ಹಿಂಡಿ. ಕುಕ್ಕರ್ ನಲ್ಲಿ 2 ವಿಷಲ್ ಕೂಗಿಸಿಕೊಳ್ಳಿ.