ನಾವು ಡ್ರೈಪೂಟ್ಸ್ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಡ್ರೈಪೂಟ್ಸ್ ಗಳಲ್ಲಿ ಗೋಡಂಬಿ ಒಂದಾಗಿದೆ, ಇದು ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುವುದು. ಹಾಗಾದರೆ ದಿನವೂ 2 ಗೋಡಂಬಿ ಸೇವಿಸುವುದರಿಂದ ಆಗುವ ಪ್ರಯೋಜನಗಳೇನು ಅಂತ ತಿಳಿಯೋಣ.
* ಮೂಳೆಗಳ ಬಲವರ್ಧನೆಗೆ ಗೋಡಂಬಿ ಉತ್ತಮ.
* ಇದು ಕೂದಲನ್ನು ಬಲಿಷ್ಠಗೊಳಿಸುತ್ತದೆ. ಜೊತೆಗೆ ಅದನ್ನು ಮೃದುವಾಗಿಸುತ್ತದೆ.
* ಗೋಡಂಬಿಯಲ್ಲಿ ಫೈಬರ್ ಇರುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು.
* ಗೋಡಂಬಿಯಲ್ಲಿ ಮೆಗ್ನೇಶಿಯಂ, ಸತು, ಕಬ್ಬಿಣದಾಂಶ, ಪಾಸ್ಪರಸ್ ಮುಂತಾದ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಇವೆ.
* ಗೋಡಂಬಿ ಉತ್ತಮ ಕೊಲೆಸ್ಟರಾಲ್ ಹೆಚ್ಚಿಸಿ, ಕೆಟ್ಟ ಕೊಲೆಸ್ಟರಾಲ್ ಕಡಿಮೆ ಮಾಡುತ್ತದೆ.
* ದೇಹದಲ್ಲಿರುವ ಗ್ಲೂಕೋಸ್‌ನ್ನು ಸ್ಟೆಬಿಲೈಸ್ ಮಾಡುತ್ತದೆ.
* ಗೋಡಂಬಿಯಲ್ಲಿರುವ ಮೆಗ್ನೀಸಿಯಂ ಗರ್ಭಿಣಿಯರಿಗೆ ಒಳ್ಳೆಯದು.
* ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.