ಚಿಕ್ಕಾಬಳ್ಳಾಪುರ: ನಮಾಜ್ ಗೆ ತೆರಳುತ್ತಿದ್ದ ವೇಳೆ ಗುಂಡೇಟಿಗೆ ಬಲಿಯಾಗಿ ಓರ್ವ ಸಾವನ್ನಪ್ಪಿದ ಘಟನೆ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ನಡೆದಿದೆ.
ನಜೀರ್ ಮತ್ತು ತಂದೆ ಬಾಬು ಸಾಬಿರವರು ಎಂದಿನಂತೆ ಬೆಳಿಗ್ಗೆ ನಮಾಜ್ ಗೆ ಹೋಗುತ್ತಿದ್ದಾಗ ಬಾಬು ಸಾಬಿರವರ ತಮ್ಮ ಗನ್ ನಲ್ಲಿ ಶೂಟ್ ಮಾಡಿದ್ದಾನೆ. ಇದರಿಂದ ನಜೀರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಾಬು ಸಾಬಿರವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಗಂಭೀರ ಗಾಯಗೊಂಡ ಅವರನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆ ಸಿಗದಿರುವ ಕಾರಣ ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾಬು ಸಾಬಿರವರು ತೀವ್ರ ಗಂಭೀರ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಗುಡಿಬಂಡೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.