ಬೇಬಿ..ನೀನಗಾಗಿ ನವರಾತ್ರಿ ಉಪವಾಸ ಮಾಡುವೆ : ಜೈಲಿನಿಂದ ರಕ್ಕಮ್ಮನಿಗೆ ಪತ್ರ ಬರೆದ ಸುಕೇಶ್

ಮನಿ ಲಾಡಂರಿಂಗ್ ಕೇಸ್‌ನಲ್ಲಿ ಬಂಧಿತನಾಗಿರುವ ಸುಕೇಶ್ ಚಂದ್ರಶೇಖರ್ ಜೈಲಿನಿಂದ ಬಾಲಿವುಡ್ ನಟಿ ಜಾಕ್ಲಿನ್ ಫರ್ನಾಂಡಿಸ್ ಅವರಿಗೆ ಪತ್ರ ಬರೆಯುತ್ತಿರೋದು ಹೊಸ ವಿಚಾರವೇನೂ ಅಲ್ಲ. ಇದೀಗ ಜೈಲಿನಿಂದಲೇ ತನ್ನ ಮನದನ್ನೇ ನಟಿ ಜಾಕ್ವೆಲಿನ್‌ಗೆ ಪತ್ರ ಬರೆದಿದ್ದಾನೆ. ನವರಾತ್ರಿಯ ಒಂಬತ್ತು ದಿನವೂ ಉಪವಾಸ ಮಾಡುವುದಾಗಿ ಹೇಳಿದ್ದಾನೆ. ‘ಬೇಬಿ..ನಾನು ನನ್ನ ಜೀವನದಲ್ಲಿ ಮೊದಲ ಬಾರಿಗೆ,ನಿನ್ನ ಯೋಗಕ್ಷೇಮಕ್ಕಾಗಿ ಮತ್ತು ನಮ್ಮ ಸುತ್ತಲಿನ ಎಲ್ಲಾ ನಕಾರಾತ್ಮಕತೆಯನ್ನು ನಿವಾರಿಸಲು ಉಪವಾಸ ಮಾಡಲಿದ್ದೇನೆ,ಮುಂದೊಂದು ದಿನ ಎಲ್ಲವೂ ಸರಿಹೋಗಲಿದೆ ಎಂದು ಭಾವಿಸಿದ್ದೇನೆ’ ನಾವು ಶೀಘ್ರದಲ್ಲೇ ಒಬ್ಬರಿಗೊಬ್ಬರು ನಿಲ್ಲುವಂತಾಗಲಿದೆ. ಏನು ಬೇಕಾದರೂ ಬರಲಿ ನಾವಿಬ್ಬರು ಜೊತೆಯಾಗಿ ಬದುಕೋಣ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ನವರಾತ್ರಿಯ ಒಂಬತ್ತನೇ ದಿನದಂದು ವೈಷ್ಣೋದೇವಿ ದೇವಸ್ಥಾನ ಮತ್ತು ಮಹಾಕಾಳೇಶ್ವರ ದೇವಸ್ಥಾನದಲ್ಲಿ ಇಬ್ಬರಿಗೂ ವಿಶೇಷ ‘ಪೂಜೆ’ ಆಯೋಜಿಸುವುದಾಗಿಯೂ ಸುಕೇಶ್ ಪತ್ರದಲ್ಲಿ ತಿಳಿಸಿದ್ದಾನೆ.​​

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement