ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಗಾದೆ ಇದೆ. ಇದು ಈ ಘಟನೆಯಲ್ಲಿ ಅಕ್ಷರಶಃ ಸತ್ಯವಾಗಿದೆ. ರೈಲಿನಲ್ಲಿನ ಪ್ರಯಾಣಿಕರ ಸೊತ್ತುಗಳನ್ನು ಅಸಿಸ್ಟೆಂಟ್ ಲೋಕೋ ಪೈಲಟ್ ಕಳ್ಳತನ ಮಾಡಿ ಈಗ ಜೈಲು ಸೇರಿದ್ದಾನೆ.
ಬೆಂಗಳೂರಿನಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ಓರ್ವ ಪ್ರಯಾಣಿಕರ ಲ್ಯಾಪ್ ಟಾಪ್ ಬಾಗ್ ಕಳ್ಳತನವಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡಾಗ ಆರೋಪಿ ಅಸಿಸ್ಟೆಂಟ್ ಲೋಕೋ ಪೈಲಟ್ ಪಡಿ ಸ್ವರಾಜ್ ಕೈ ಚಳಕ ಬಯಲಾಗಿದೆ.
ಅರಸಿಕೆರೆ ರೈಲ್ವೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು ಅಸಿಸ್ಟೆಂಟ್ ಲೋಕೋ ಪೈಲಟ್ ಸ್ವರಾಜ್ ನನ್ನು ಬಂಧಿಸಿ 3 ಲಕ್ಷದ 33 ಸಾವಿರದ 489 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಒಂದು ವರ್ಷದ ಹಿಂದೆಯಷ್ಟೇ ಬಡ ಕುಟುಂಬದ ಹುಡಗಿಯನ್ನ ಮದುವೆಯಾಗಿದ್ದ ಪಡಿ ಸ್ವರಾಜ್ ಸುಮಾರು 13 ಲಕ್ಷ ಸಾಲ ಮಾಡಿಕೊಂಡಿದ್ದರು. ಮೈ ತುಂಬಾ ಇದ್ದ ಸಾಲ ತೀರಿಸಲಾಗದೇ ಒದ್ದಾಡುತ್ತಿದ್ದ. ಉಡುಪಿ ಪ್ರಯಾಣಿಕನ ಲ್ಯಾಪ್ ಟಾಪ್ ಕಳವಾದ ಬಗ್ಗೆ ದೂರು ಬಂದಾಗ ಅನುಮಾನ ಬಂದು ಪೊಲೀಸರು, ಪಡಿ ಸ್ವರಾಜ್ ಟ್ರಾಲಿ ಬ್ಯಾಗ್ ಪರಿಶೀಲಿಸಿದ್ದು ಅತನ ಬ್ಯಾಗ್ನಲ್ಲಿ ಮೊಬೈಲ್ ಫೋನ್ಗಳು, ಆಭರಣ ಪತ್ತೆಯಾಗಿದೆ. ಪೊಲೀಸರು ಮೊದಲಿಗೆ ತನ್ನ ಹೆಂಡತಿಯ ಆಭರಣ ಕಥೆ ಕಟ್ಟಿದ್ದು, ಬಳಿಕ ಪೊಲೀಸರ ವಿಚಾರಣೆಯಲ್ಲಿ ಕಳ್ಳತನ ಮಾಡುತ್ತಿರೋದಾಗಿ ತಪ್ಪೊಪ್ಪಿಕೊಂಡಿದ್ದ.