ಮಂಗಳೂರಿನ ಪ್ರಸಿದ್ಧ ಬೊಂಡಾ ಶರ್ಬತ್ (ಎಳನೀರು ಜ್ಯೂಸ್) ಸೇವಿಸಿದ್ದೀರಾ? ಬಿರು ಬೇಸಿಗೆಯ ತಾಪಕ್ಕೆ ಬಳಲಿ ಬೆಂಡಾದ ಕರಾವಳಿ ಜನತೆ ಬೊಂಡಾ ಶರ್ಬತ್ ಮೊರೆ ಹೋಗುವುದು ಸಾಮಾನ್ಯ.
ಮಂಗಳೂರು, ಉಡುಪಿಯಲ್ಲಿ ಎಳನೀರು ಪಾನೀಯ, ಬೊಂಡಾ ಶರ್ಬತ್ ಎಂದೇ ಪ್ರಸಿದ್ಧಿ ಪಡೆದಿದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದನ್ನು ತಯಾರಿಸುವ ಬಗೆ ಹೇಗೆ ಎಂಬುದು ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
ಎಳನೀರು – 2 ಎಳನೀರು ಗಂಜಿ- ½ ಕಪ್ ಬೇಕಿದ್ದರೆ ಐಸ್ ನೀರು- ½ ಅಥವಾ 1 ಕಪ್ ಸಕ್ಕರೆ- ರುಚಿಗೆ ತಕ್ಕಷ್ಟು ನಿಂಬೆರಸ- 2 ಚಮಚ ಏಲಕ್ಕಿ ಪುಡಿ- ಚಿಟಿಕೆ ಉಪ್ಪು- ಚಿಟಿಕೆ
ಮಾಡುವ ವಿಧಾನ:
ತೆಗೆದುಕೊಂಡ ತಣ್ಣನೆಯ ನೀರಿಗೆ ನಿಂಬೆರಸ, ಉಪ್ಪು ಹಾಗೂ ಸಕ್ಕರೆ ಮಿಶ್ರಣ ಮಾಡಿ. ಸಕ್ಕರೆ ಸಂಪೂರ್ಣವಾಗಿ ಕರಗುವ ತನಕ ಅವುಗಳನ್ನು ಚೆನ್ನಾಗಿ ಬೆರೆಸಿ. ನಂತರ ಎಳನೀರು, ಎಳನೀರು ಗಂಜಿ ಮತ್ತು ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಬೊಂಡಾ ಶರ್ಬತ್ ಸವಿಯಲು ಸಿದ್ಧ. ಬಿರು ಬಿಸಿಲಿಗೆ ಹೊಟ್ಟೆಯನ್ನು ಇದು ತಂಪಾಗಿಸುತ್ತದೆ.