ಎಲ್ಲಾ ಕಡೆ ಹೆಚ್ಚಾಗಿ ಸಿಗುತ್ತಿರುವ ಕರ್ಬುಜ ಹಣ್ಣನ್ನು ತಂದು ನೀವು ತಿನ್ನಿ ಮನೆಯವರಿಗೂ ಜ್ಯೂಸ್ ಮಾಡಿಕೊಡಿ. ಬೇಸಿಗೆ ಕಾಲದಲ್ಲಿ ಇದರಿಂದ ನಿಮ್ಮ.
ಒಂದೊಂದು ಸೀಸನ್ ನಲ್ಲಿ ಒಂದೊಂದು ಬಗೆಯ ಹಣ್ಣುಗಳು ಮಾರುಕಟ್ಟೆಗೆ ಹೆಚ್ಚಾಗಿ ಬರುವುದನ್ನು ನಾವು ಗಮನಿಸಿದ್ದೇವೆ. ಈಗ ದ್ರಾಕ್ಷಿ ಹಣ್ಣು, ಕಲ್ಲಂಗಡಿ ಹಣ್ಣು ಮತ್ತು ಕರ್ಬುಜ ಹಣ್ಣುಗಳ ಕಾಲ. ಹಾಗಾಗಿ ಇವುಗಳ ಬೆಲೆಯೂ ಕಡಿಮೆ, ಡಿಮ್ಯಾಂಡ್ ಕೂಡ ಜಾಸ್ತಿ. ಜನರು ಬೇಸಿಗೆ ಕಾಲದಲ್ಲಿ ಈ ಹಣ್ಣುಗಳನ್ನು ಇಷ್ಟ ಪಟ್ಟು ತಿನ್ನುತ್ತಾರೆ.
ಅದರಲ್ಲೂ ಕರ್ಬುಜ ಹಣ್ಣು ಜ್ಯೂಸ್ ಮಾಡುವ ಸಲುವಾಗಿ ಎಲ್ಲರ ಮನೆ ಮಾತಾಗಿದೆ. ಕರ್ಬುಜ ಹಣ್ಣಿನ ವಿವಿಧ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಲು ಮುಂದಾದರೆ ದೇಹ ತಂಪಾದಷ್ಟು ಮನಸ್ಸು ಖುಷಿಯಾಗುತ್ತದೆ. ಹಾಗಿದ್ದರೆ ಬನ್ನಿ ಕರ್ಬೂಜ ಹಣ್ಣಿನ ಬಗ್ಗೆ ಡಾಕ್ಟರ್ ದೀಪ್ಶಿಕಾ ಏನು ಹೇಳುತ್ತಾರೆ ಕೇಳೋಣ….
ಇದರಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ
ಕರ್ಬುಜ ಹಣ್ಣಿನಲ್ಲಿ ನಿಮ್ಮ ದೇಹದ ತೂಕವನ್ನು ಹೆಚ್ಚು ಮಾಡುವ ಯಾವುದೇ ಅಂಶಗಳಿಲ್ಲ. ಜೊತೆಗೆ ಕ್ಯಾಲೋರಿ ಗಳು ಸಹ ಕಡಿಮೆ ಇರುವುದರಿಂದ ನಿಮ್ಮ ದೇಹದ ತೂಕ ನಿಯಂತ್ರಣ ದಲ್ಲಿ ನೀವು ಇದನ್ನು ನಂಬಬಹುದು.
ಅಷ್ಟೇ ಅಲ್ಲದೆ ಇದು ತನ್ನಲಿನ ಹೆಚ್ಚಿನ ಪ್ರಮಾಣದ ನೀರಿನ ಅಂಶದ ಕಾರಣದಿಂದ ಇದು ನಿಮ್ಮ ಹೊಟ್ಟೆ ಹಸಿವನ್ನು ಸಹ ನಿಯಂತ್ರಣ ಮಾಡುತ್ತದೆ.
ಬೇಸಿಗೆಕಾಲದಲ್ಲಿ ನಿಮ್ಮ ದೇಹ ನಿರ್ಜಲೀಕರಣ ಆಗದಂತೆ ನೋಡಿಕೊಂಡು ನಿಮಗೆ ಹೊಟ್ಟೆ ತುಂಬಿದ ಅನುಭವ ಉಂಟುಮಾಡುತ್ತದೆ.
ಕಡಿಮೆ ಸಕ್ಕರೆ ಪ್ರಮಾಣ ಇರುವ ಕಾರಣದಿಂದ ಸಕ್ಕರೆ ಕಾಯಿಲೆ ಇರುವ ಜನರಿಗೂ ಕೂಡ ಇದು ಒಳ್ಳೆಯದು ಎಂದು ಡಾಕ್ಟರ್ ಹೇಳುತ್ತಾರೆ.
ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ
ಡಾಕ್ಟರ್ ದೀಪ್ಶಿಕಾ ಹೇಳುವ ಪ್ರಕಾರ ಯಾರಿಗೆ ಅತಿಯಾದ ಗ್ಯಾಸ್ಟ್ರಿಕ್, ಎದೆಯುರಿ ಮತ್ತು ಹೊಟ್ಟೆ ಉಬ್ಬರದ ಸಮಸ್ಯೆ ಇರುತ್ತದೆ ಅಂತಹವರು ಈಗ ಎಲ್ಲಾ ಕಡೆ ಹೆಚ್ಚಾಗಿ ಸಿಗುತ್ತಿ ರುವ ಕರ್ಬುಜ ಹಣ್ಣನ್ನು ತಂದು ತಿನ್ನುವುದರಿಂದ ಬಹು ದಿನಗಳ ಗ್ಯಾಸ್ಟ್ರಿಕ್ ಸಮಸ್ಯೆ ಸುಲಭವಾಗಿ ಪರಿಹಾರ ವಾಗುತ್ತದೆ.
ಹೊಟ್ಟೆಯಲ್ಲಿ ಹಾಗೂ ಕರುಳಿನ ಭಾಗದಲ್ಲಿ ಉಂಟಾಗಿ ರುವ ಅಲ್ಸರ್ ಕೂಡ ಇಲ್ಲವಾಗುತ್ತದೆ.
ಮಲಬದ್ಧತೆ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ
ಮಲಬದ್ಧತೆ ಸಮಸ್ಯೆಯನ್ನು ಹೆಚ್ಚಾಗಲು ಬಿಟ್ಟರೆ ಅದರಿಂದ ಪೈಲ್ಸ್ ಬರುತ್ತದೆ. ಈ ರೀತಿ ಆಗಬಾರದು ಎಂದರೆ ಸಾಧ್ಯ ವಾದಷ್ಟು ಈ ಸಮಸ್ಯೆಯನ್ನು ಆರಂಭದಲ್ಲಿ ಬಗೆಹರಿಸಿ ಕೊಳ್ಳಲು ಟ್ರೈ ಮಾಡಬೇಕು.
ಈ ನಿಟ್ಟಿನಲ್ಲಿ ನಿಮಗೆ ಕರ್ಬೂಜ ಹಣ್ಣು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿರುವ ನಾರಿನ ಅಂಶ ನಿಮ್ಮ ಕರುಳಿನ ಭಾಗದಲ್ಲಿ ಉತ್ತಮ ಚಲನೆ ಉಂಟಾಗು ವಂತೆ ಮಾಡಿ ನೀವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುವಂತೆ ಮಾಡುತ್ತದೆ.
ಇದರಿಂದ ನಿಮ್ಮ ಗಟ್ಟಿಯಾದ ಮಲ ತೆಳ್ಳಗೆ ಆಗುತ್ತದೆ ಮತ್ತು ಸುಲಭವಾಗಿ ಮಲವಿಸರ್ಜನೆ ಆಗುತ್ತದೆ.
ರಕ್ತದ ಒತ್ತಡ ಕಂಟ್ರೋಲ್ ಮಾಡುತ್ತದೆ
ಪೊಟಾಸಿಯಂ ಪ್ರಮಾಣ ಹೆಚ್ಚಾಗಿರುವ ಕರ್ಬುಜ ಹಣ್ಣನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನ ಕಾಯ್ದುಕೊಳ್ಳುತ್ತದೆ ಜೊತೆಗೆ ನಿಮ್ಮ ರಕ್ತದಲ್ಲಿ ಇರುವ ಒತ್ತಡವನ್ನು ನಿಯಂತ್ರ ಣಕ್ಕೆ ತರುತ್ತದೆ.
ಸುಲಭವಾಗಿ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಉಂಟಾ ಗುವ ಹಾಗೆ ಮಾಡುತ್ತದೆ. ಇದರಲ್ಲಿರುವ ಖನಿಜಾಂಶಗಳು ನಿಮಗೆ ಪಾರ್ಶ್ವವಾಯು ಉಂಟಾಗದಂತೆ ನೋಡಿ ಕೊಂಡು ನಿಮ್ಮ ಹೃದಯದ ಕಾಯಿಲೆಯನ್ನು ದೂರ ಮಾಡುತ್ತದೆ.
ಮೂತ್ರವರ್ಧಕ ಹಣ್ಣು ಕೂಡ ಹೌದು
ನಿಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ಹಾಕುವ ಶಕ್ತಿ ಹೊಂದಿರುವ ಕರ್ಬುಜ ಹಣ್ಣು ನಿಮ್ಮ ದೇಹದಿಂದ ಹೆಚ್ಚಿನ ನೀರಿನ ಪ್ರಮಾಣವನ್ನು ಸಹ ಮೂತ್ರ ವಿಸರ್ಜನೆಯ ಮೂಲಕ ಹೊರಹಾಕುತ್ತದೆ.
ಇದರಿಂದ ನಿಮ್ಮ ಕಿಡ್ನಿ ಕಾಯಿಲೆಗಳು ದೂರವಾಗುತ್ತವೆ ಮತ್ತು ಆರೋಗ್ಯಕರವಾದ ಕಿಡ್ನಿಗಳು ನಿಮ್ಮದಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ.
ಆಂಟಿ ಆಕ್ಸಿಡೆಂಟ್ ಹೆಚ್ಚಾಗಿದೆ
ಕರ್ಬೂಜ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ ಜೊತೆಗೆ ಬೀಟಾ ಕ್ಯಾರೋಟಿನ್, ಪೋಲಿಕ್ ಆಮ್ಲ, ಪೊಟ್ಯಾಶಿಯಂ ಪ್ರಮಾಣ ಜೋರಾಗಿದ್ದು, ನಿಮ್ಮ ದೃಷ್ಟಿ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸುತ್ತದೆ.
ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿರುವ ಹಣ್ಣು ಇದಾಗಿದ್ದು ನಿಮ್ಮ ಚರ್ಮದ ತಾಜಾತನವನ್ನು ಕಾಪಾಡುತ್ತದೆ ಮತ್ತು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಕ್ಯಾನ್ಸರ್ ವಿರೋಧಿ ಲಕ್ಷಣಗಳು ಇದರಲ್ಲಿವೆ
ಮೇಲೆ ಹೇಳಿದಂತೆ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಾ ಗಿರುವ ಕರ್ಬುಜ ಹಣ್ಣಿನಲ್ಲಿ ನಿಮ್ಮ ದೇಹದ ಜೀವ ಕೋಶಗಳನ್ನು ಕಾಪಾಡುವ ಗುಣವಿದೆ ಮತ್ತು ಫ್ರೀ ರಾಡಿಕಲ್ ಅಂಶಗಳನ್ನು ಇದು ದೂರ ಮಾಡುತ್ತದೆ.
ಹಲವಾರು ಬಗೆಯ ಕ್ಯಾನ್ಸರ್ ಸಮಸ್ಯೆಗಳ ವಿರುದ್ಧ ರಕ್ಷಣಾತ್ಮಕ ವಾಗಿ ಕರ್ಬುಜ ಹಣ್ಣು ಕೆಲಸ ಮಾಡುತ್ತದೆ. ಹೊಟ್ಟೆ ಹಸಿವಿನ ನಿವಾರಣೆಯಿಂದ ಹಿಡಿದು ಹೊಟ್ಟೆ ಯಲ್ಲಿ ಹುಣ್ಣುಗಳು, ಕಿಡ್ನಿಯಲ್ಲಿ ಕಲ್ಲುಗಳು, ಮೂತ್ರ ನಾಳದ ಸೋಂಕು ಈ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ವಾಗಿ ಕರ್ಬೂಜ ಹಣ್ಣು ಕೆಲಸ ಮಾಡ ಬಲ್ಲದು.