ಚಳ್ಳಕೆರೆ: ಕುಮಾರಸ್ವಾಮಿಯವರಿಗೆ ಏನೇನೋ ಮಾಹಿತಿ ಬರ್ತಾ ಇರಬಹುದು ದಳ ಹಾಗೂ ಬೇರೆ ಬೇರೆಯವರ ಸಂಪರ್ಕದಲ್ಲಿ ಇರಬಹುದು ನನ್ನ ಹತ್ರ ಯೋಗೇಶ್ವರ ಸಂಪರ್ಕದಲ್ಲಿ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಅವ್ರೇನಾದ್ರೂ ಕನ್ನಡ ಹಾಕೊಂಡು ಮಾಡಿರಬೇಕು ನಾನು ಕನ್ನಡ ಹಾಕೊಳೋದು ಹಗಲು ಹೊತ್ತು, ಓದುವಾಗ ಅವ್ರು ನೈಟ್ ರೌಂಡ್ಸ ನಲ್ಲಿ ಯಾಕೆ ಹಾಕೋತಾರೋ ಗೊತ್ತಿಲ್ಲ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಮಳೆ ಬರ್ಲಿ, ಭೂಮಿ ಕುಡೀಲಿ, ಕೆರೆ ತುಂಬಲಿ ಕಾವೇರಿ ನೀರು ತಮಿಳುನಾಡಿಗೆ ಜಾಸ್ತಿ ಹರಿದು ಹೋಗ್ಲಿ ಮೇಕೆದಾಟು ಯೋಜನೆ ಬರ್ಲಿ ಮಳೆಯಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಸರಕಾರ ಕಾರ್ಯ ನಡೆಸಲಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಲ್ಲಿ ಅವಾಂತರ ಆಗಿದೆ ನಿಜ ಆದರೆ ಜನರು ಅಂಡರ್ ಗ್ರೌಂಡ್ ಲೆವೆಲ್ ನಲ್ಲಿ ಮನೆ ಕಟ್ಟಿಕೊಂಡಿದ್ದಾರೆ ಮಳೆ ಕಡಿಮೆಯಾಗಿತ್ತಿದ್ದಂತೆ ಅದಕ್ಕೆ ಪರಿಹಾರ ಹುಡುಕುವ ಕಾರ್ಯಮುಂದುವರೆಸಲಾಗುತ್ತೆದೆ.
ಮಳೆಯಿಂದ ಬೆಳೆ ಹಾನಿ ಪರಿಹಾರ ಕುರಿತು ಪ್ರತಿಕ್ರಿಯೆ ಮೊದಲು ಮಳೆ ಬರ್ಲಿ ಅಮೇಲೆ ಪರಿಹಾರ ನೋಡೋಣ ಕೇಂದ್ರ ಸರಕಾರ ಪರಿಹಾರ ಕೊಡಿತ್ತೆ, ನಾವು ಅದಕ್ಕೆ ಸಹಾಯ ಮಾಡ್ತೀವಿ ಎಂದರು.