ನವದೆಹಲಿ: ಪ್ರತಿ ಹೊಸ ತಿಂಗಳು ಪ್ರಾರಂಭವಾಗುವ ಮುನ್ನ ಆ ತಿಂಗಳಿಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಅದರಂತೆ ಅಕ್ಟೋಬರ್ ತಿಂಗಳ ಬ್ಯಾಂಕ್ ರಜಾಪಟ್ಟಿ ಬಿಡುಗಡೆ ಮಾಡಿದೆ.
ಅಕ್ಟೋಬರ್ ಬಂತು ಅಂದರೆ ಸಾಲು ಸಾಲು ಹಬ್ಬಗಳದ್ದೇ ಮಾತು. ದಸರಾ ಹಬ್ಬ ಈ ತಿಂಗಳಲ್ಲೇ ಇರುವ ಕಾರಣ ದೇಶಾದ್ಯಂತ ಬ್ಯಾಂಕುಗಳಿಗೆ ಸಾಲು ಸಾಲು ರಜೆಗಳಿವೆ. ಅ. 14 ರಂದು ಮಹಾಲಯ ಅಮವಾಸ್ಯೆ ರಜೆ ಇದ್ದರೆ, 23ಕ್ಕೆ ಮಹಾನವಮಿ/ ಆಯುಧ ಪೂಜೆಯ ರಜೆ ಇದೆ. 24ರಂದು ವಿಜಯ ದಶಮಿಯ ರಜೆ ಸಿಗಲಿದೆ. ಇದರ ಜೊತೆ ಅಕ್ಟೋಬರ್ 15, 22, 29 ರಂದು ಭಾನುವಾರದ ರಜೆಯಾದರೆ, 28ಕ್ಕೆ ನಾಲ್ಕನೇ ಶನಿವಾರದ ರಜೆಯೂ ಸಿಗಲಿದೆ.
ಆಯಾ ಪ್ರಾದೇಶಿಕ ಆಚರಣೆಗಳು ಹಾಗೂ ಹಬ್ಬಗಳಿಗೆ ಅನುಗುಣವಾಗಿ ರಜೆಗಳನ್ನು ನೀಡಲಾಗುತ್ತದೆ. ಆದರೆ, ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಇನ್ನು ಎಲ್ಲ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ. ರಜಾ ದಿನಗಳಂದು ಆನ್ ಲೈನ್ ವಹಿವಾಟುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಬ್ಯಾಂಕಿಗೆ ಭೇಟಿ ನೀಡಿ ಮಾಡುವ ಕೆಲಸವಿದ್ರೆ ರಜಾ ದಿನಗಳ ಬಗ್ಗೆ ನೋಡಿಕೊಂಡು ಹೋಗೋದು ಒಳ್ಳೆಯದು.