ಬ್ಯಾಂಕ್ ಆಫ್ ಬರೋಡದಲ್ಲಿ(Bank of Baroda job) 600ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅಭ್ಯರ್ಥಿಗಳನ್ನು ಕಾಯಂ ಮತ್ತು ಗುತ್ತಿಗೆ ಆಧಾರಿತ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು ನೇಮಕಾತಿಯ ಪೂರ್ಣ ವಿವರ ಕೆಳಗಿದೆ.
Bank of Baroda 627 Vacancy’s : ಮ್ಯಾನೇಜರ್, ಪ್ರೇಸಿಡೆಂಟ್, ಗ್ರೂಪ್ ಸೇಲ್ಸ್ ಹೆಡ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು ಅರ್ಜಿ ಸಲ್ಲಿಸಲು ಜುಲೈ 2 ಕೊನೆಯ ದಿನಾಂಕ ನಿಗದಿಪಡಿಸಲಾಗಿದೆ. ಅಸಕ್ತರು ಈ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಈಗಲೇ ಅರ್ಜಿ ಸಲ್ಲಿಸಿ.
ನೇಮಕಾತಿ ಸಂಕ್ಷಿಪ್ತ ವಿವರ :
• ನೇಮಕಾತಿ ಸಂಸ್ಥೆ : ಬ್ಯಾಂಕ್ ಆಫ್ ಬರೋಡಾ• ಒಟ್ಟು ಹುದ್ದೆಗಳ ಸಂಖ್ಯೆ : 627 ಹುದ್ದೆಗಳು • ಅರ್ಜಿ ಸಲ್ಲಿಸುವುದು : ಆನ್ಲೈನ್ ಮುಖಾಂತರ • ಉದ್ಯೋಗ ಸ್ಥಳ : All India
ಹುದ್ದೆಗಳ ವಿವರ :
ಈ ನೇಮಕಾತಿಯನ್ನು ಕಾಯಂ ಮತ್ತು ಗುತ್ತಿಗೆ ಆಧಾರಿತ ಎರಡು ವಿಧಗಳಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದ್ದು ಹುದ್ದೆಗಳ ವಿಂಗಡಣೆಯು ಈ ಕೆಳಗಿನಂತಿದೆ.• ಖಾಯಂ ಆಧಾರಿತ ನೇಮಕ ಹುದ್ದೆಗಳು : 168 ಹುದ್ದೆಗಳು • ಗುತ್ತಿಗೆ ಆಧಾರಿತ ನೇಮಕ ಹುದ್ದೆಗಳು : 459 ಹುದ್ದೆಗಳು • ಒಟ್ಟು ನೇಮಕಾತಿ ಹುದ್ದೆಗಳು : 627 ಹುದ್ದೆಗಳು
ನೇಮಕಾತಿಯ ಪ್ರಮುಖ ದಿನಾಂಕಗಳು :
• ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದೆ • ಅರ್ಜಿ ಸಲ್ಲಿಸಲು ನಿಗದಿತ ಕೊನೆಯ ದಿನಾಂಕ : ಜುಲೈ 02, 2024
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಅರ್ಹತೆಗಳು :
ನೇಮಕಾತಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಬಿಇ /ಬಿ. ಟೆಕ್ ಸೇರಿದಂತೆ ಯಾವುದೇ ರೀತಿಯ ಪದವಿ ಮುಗಿಸಿದವರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ವಯೋಮಿತಿ ಮಾನದಂಡ : ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 25 ವರ್ಷದಿಂದ ಗರಿಷ್ಟ 40 ವರ್ಷದ ವಯೋಮಿತಿ ಒಳಗಡೆ ಇರಬೇಕು.
ಅರ್ಜಿ ಶುಲ್ಕ :
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಮತ್ತು ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ – ₹100/-• ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ₹600/-
ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕುಗಳು :
https://www.bankofbaroda.in/