ಹುಬ್ಬಳ್ಳಿ: ಮನೆಯಲ್ಲಿಟ್ಟರೆ ಕಳ್ಳಕಾಕರ ಭಯ, ಲಾಕರ್ ಸುಭದ್ರವೆಂದು ಅದೆಷ್ಟೋ ಮಂದಿ ಆಭರಣ ಹಾಗೂ ದಾಖಲೆಗಳನ್ನು ಬ್ಯಾಂಕ್ ಲಾಕರ್ ಇಟ್ಟಿರುತ್ತಾರೆ. ಆದರೆ ಈಗ ಬ್ಯಾಂಕ್ ಲಾಕರ್‌ನಲ್ಲಿ ಚಿನ್ನಾಭರಣ ಇಡುವುದು ಎಷ್ಟು ಸೇಫ್ ಅನ್ನುವ ಪ್ರಶ್ನೆಯನ್ನು ಈ ಘಟನೆ ಹುಟ್ಟುಹಾಕಿದೆ.
ಹುಬ್ಬಳ್ಳಿಯ ಶಾಂತಿ ನಗರದ ನಿವಾಸಿ ಈಶ್ ಕೋಹ್ಲಿ ಅವರು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣವೇ ನಾಪತ್ತೆಯಾಗಿದೆ. ಅಂದರೆ ಬರೋಬ್ಬರಿ 56 ಲಕ್ಷ ಮೌಲ್ಯದ(ಈಗಿನ ಮೌಲ್ಯ 1.5 ಕೋಟಿ ರೂ.) ಚಿನ್ನಾಭರಣ ಮಾಯವಾಗಿದೆ. 2013 ರಲ್ಲಿ ಎಸ್‌ಬಿಐ ಬ್ಯಾಂಕ್‌ನಲ್ಲಿ ತಂದೆ-ತಾಯಿ ಹೆಸರನಲ್ಲಿ ಎರಡೂ ಲಾಕರ್‌ಗಳನ್ನು ತೆಗೆದುಕೊಂಡಿದ್ದ ಈಶ್ ಕೋಹ್ಲಿ, 2014 ರಲ್ಲಿ 56 ಲಕ್ಷ ರೂ ಮೌಲ್ಯದ ಚಿನ್ನಾಭರಣ ಇಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಲಾಕರ್‌ಗೆ ಬಾಡಿಗೆ ಸಹ ತುಂಬಿದ್ದರು. ಆದರೆ ಈಗ ಬ್ಯಾಂಕ್ ಗೆ ಹೋಗಿ ಲಾಕರ್ ನಿಂದ ಚಿನ್ನಾಭರಣ ತೆಗೆದುಕೊಂಡು ಬರಲಿಕ್ಕೆ ಹೋದಾಗ ಆಘಾತಕ್ಕೆ ಒಳಗಾಗಿದ್ದಾರೆ.
ಕೇಶ್ವಾಪೂರದ ಎಸ್.ಬಿ.ಐ ಬ್ಯಾಂಕ್ ನ ಲಾಕರ್ ಓಪನ್ ಮಾಡಿಸಲು ಬೇಕಾದ ಕೀಲಿ ಈಶ್ ಅವರ ಕಡೆಯಲ್ಲಿದ್ದರೂ ಲಾಕರ್ ಓಪನ್ ಆಗಿದ್ದು, ಇದರಿಂದ ಕಂಗಾಲಾದ ಈಶ್ ಅವರು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಯಾವ ಲಾಕರ್ ಖಾಲಿ ಇರುತ್ತದೆಯೋ ಅದು ಒಪನ್ ಇರತ್ತೆ,ಒಂದು ರೂಪಾಯಿ ವ್ಯತ್ಯಾಸ ಆಗೋದಿಲ್ಲ. ನಾವು ಪರಿಶೀಲನೆ ಮಾಡ್ತೀವಿ, ಅದರೆ ಸ್ವಲ್ಪ ಸಮಯ ಕೊಡಿ ಎನ್ನುತ್ತಾರೆ ಎಸ್.ಬಿ.ಐ ಬ್ಯಾಂಕ್ ನ ಎಜಿಎಂ ದೀಲಿಪ್ ಕೆಂಬಾವಿ.