ಬ್ಯಾಗಿನಲ್ಲಿ ಪುಸ್ತಕಗಳ ಮಧ್ಯೆಯಿದ್ದ ಚೇಳು ಕಚ್ಚಿ ವಿದ್ಯಾರ್ಥಿ ಮೃತ್ಯು

ಆಂದ್ರ: ಆಂದ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಬ್ಯಾಗಿನಲ್ಲಿ ಪುಸ್ತಕಗಳ ಮಧ್ಯೆಯಿದ್ದ ಚೇಳು ಕಚ್ಚಿ ವಿದ್ಯಾರ್ಥಿಯೊಬ್ಬ ಸಾವನಪ್ಪಿರುವ ಘಟನೆ ನಡೆದಿದೆ.

9ನೇ ತರಗತಿಯ ರವಿಕಿರಣ ಮೃತ ವಿದ್ಯಾರ್ಥಿ. ಪುಸ್ತಕಗಳಿದ್ದ ಬ್ಯಾಗಿನೊಳಕ್ಕೆ ವಿದ್ಯಾರ್ಥಿ ಕೈಹಾಕಿದ್ದು ಈ ವೇಳೆ ಚೇಳೊಂದು ಕೈಗೆ ಕುಟುಕಿದ್ದು, ತಕ್ಷಣ ರವಿಕಿರಣ ಚೀರಾಡಿದ್ದಾನೆ. ತಕ್ಷಣ ಶಿಕ್ಷಕರು, ಶಾಲೆಯ ಮುಖ್ಯೋಪಾಧ್ಯಾಯರು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ ರವಿಕಿರಣನ ಪರಿಸ್ಥಿತಿ ವಿಷಮಿಸಿ ಚೇಳಿನ ವಿಷ ಅವನ ಮೈಯೊಳಗೆ ಇಳಿಯುತ್ತಾ ಸಾಗಿ ಚಿಕಿತ್ಸೆ ಪಡೆಯುತ್ತಿದ್ದ ರವಿಕಿರಣ ಸಾವನ್ನಪ್ಪಿದ್ದಾನೆ.

ಈ ಬಗ್ಗೆ ಮಾರ್ಕಾಪುರದ ರೂರಲ್ ಎಸ್ಸೈ ವೆಂಕಟೇಶ್ ನಾಯ್ಕ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement