ಬ್ರಿಟನ್: ಬ್ರಿಟನ್‌ನಲ್ಲಿ ಕೊರೊನಾ ಹೊಸ ರೂಪಾಂತರ ಜನರಲ್ಲಿ ಮತ್ತೊಮ್ಮೆ ಆತಂಕ ಸೃಷ್ಟಿಸಿದೆ. ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ(ಯುಕೆಎಚ್‌ಎಸ್‌ಎ) ಪ್ರಕಾರ, ಇಲ್ಲಿ ಪ್ರತಿ 7 ರೋಗಿಗಳಲ್ಲಿ ಒಬ್ಬರು ಈ ಹೊಸ ರೂಪಾಂತರಿ ಸೋಂಕಿಗೆ ಒಳಗಾಗಿದ್ದಾರೆ.
ಇದು EG.5.1 ಎಂದು ಹೆಸರಿಸಲಾದ ಒಮಿಕ್ರಾನ್ ನಿಂದ ಪಡೆದ ರೂಪಾಂತರಿಯಾಗಿದೆ. ಏಜೆನ್ಸಿಯ ಪ್ರಕಾರ, ಈ ಹೊಸ ರೂಪಾಂತರದ ಹೆಚ್ಚಿನ ಪ್ರಕರಣಗಳು ಏಷ್ಯಾದಲ್ಲಿ ಕಂಡುಬರುತ್ತಿವೆ. ಇದು ಇಲ್ಲಿವರೆಗೆ ಕಾಣಿಸಿರುವ ಕೊರೊನಾದ 2ನೇ ಅತ್ಯಂತ ಅಪಾಯಕಾರಿ ರೂಪಾಂತರಿಯಾಗಿದೆ ಎಂದು ವರದಿಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಕೇವಲ ಎರಡು ವಾರಗಳ ಹಿಂದೆ EG.5.1 ರೂಪಾಂತರವನ್ನು ಪತ್ತೆಹಚ್ಚಲು ಪ್ರಾರಂಭಿಸಿತ್ತು.