ಬ್ಲಾಕ್ ಹೆಡ್ಸ್ ನಮ್ಮ ಮುಖದ ಒಟ್ಟು ಸೌಂದರ್ಯವನ್ನು ಹಾಳುಮಾಡುತ್ತದೆ. ಆಕರ್ಷಣೆಯನ್ನು ಕಡಿಮೆ ಮಾಡಿ ಮುಖದ ಮೇಲೆಲ್ಲಾ ಕಲೆಗಳು ಉಳಿದಂತೆ ಕಾಣಿಸುತ್ತವೆ.
ಮುಖದ ಮೇಲೆ ಕುಳಿತ, ಉಳಿದ ಧೂಳಿನ ಕೊಳೆಯೇ ಬ್ಲಾಕ್ ಹೆಡ್ಸ್ ಗಳ ಹುಟ್ಟಿಗೆ ಕಾರಣವಾಗುತ್ತವೆ. ಇದರ ನಿವಾರಣೆಗೆ ಬೇಕಿಂಗ್ ಸೋಡಾವನ್ನು ಪರಿಣಾಮಕಾರಿಯಾಗಿ ಬಳಸಬಹುದು.
ಒಂದು ಚಮಚ ಸೋಡಾ ಪುಡಿಗೆ ಎರಡು ಚಮಚ ನೀರು ಸೇರಿಸಿ ಬೆರೆಸಿ ದಪ್ಪನೆಯ ಪೇಸ್ಟ್ ತಯಾರಿಸಿ. ಕಲೆ ಇರುವ ಜಾಗಕ್ಕೆ ಹಚ್ಚಿ. 20 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಇದರಿಂದ ನಿಮ್ಮ ತ್ವಚೆಯಲ್ಲಿ ಉಂಟಾಗುವ ತುರಿಕೆ ಕಡಿಮೆಯಾಗಿ ಈ ಸೋಂಕು ಹರಡದಂತೆ ನೋಡಿಕೊಳ್ಳುತ್ತದೆ.
ಗ್ರೀನ್ ಟೀ ಎಲೆಗಳನ್ನು ನೀರಿನಲ್ಲಿ ನೆನೆಸಿ ಗಟ್ಟಿಯಾದ ಪೇಸ್ಟ್ ತಯಾರಿಸಿ. ಇದನ್ನು ಬ್ಲಾಕ್ ಹೆಡ್ಸ್ ಮತ್ತು ಕಲೆ ಇರುವ ಜಾಗಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಳಿಕ ಮುಖ ತೊಳೆದರೆ ಕಲೆ ಮಾಯವಾಗುತ್ತದೆ.
ಎಗ್ ವೈಟ್ ನಿಂದಲೂ ಇದೇ ಪರಿಣಾಮವನ್ನು ಪಡೆಯಬಹುದು. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ತಯಾರಿಸಿ. ಈ ಪೇಸ್ಟನ್ನು ಮುಖಕ್ಕೆ ಹಚ್ಚಿ ತೊಳೆಯುವುದರಿಂದ ಸಣ್ಣ ರಂಧ್ರಗಳು ಮುಚ್ಚುತ್ತವೆ ಮಾತ್ರವಲ್ಲ ತ್ವಚೆಗೆ ವಿಶೇಷ ಹೊಳಪು ಸಿಗುತ್ತದೆ.