ಮುಂಬೈ: ಮುಂಬೈನಲ್ಲಿ ₹17,840 ಕೋಟಿಗೂ ಹೆಚ್ಚು ವೆಚ್ಚ ದಲ್ಲಿ ನಿರ್ಮಿಸಲಾದ ಭಾರತದ ಅತಿ ಉದ್ದದ ಸಮುದ್ರ ಸೇತುವೆಯಾದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ‘ಅಟಲ್ ಸೇತು‘ ಅನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ದೇಶಕ್ಕೆ ಸಮರ್ಪಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನ ಇಡಲಾಗಿರುವ ಸೇರುವೆ 21.8 ಕಿ.ಮೀ ಉದ್ದದ ಆರು ಪಥದ ಸೇತುವೆಯಾಗಿ 6.5 ಕಿಮೀ ಸಮುದ್ರದ ಮೇಲೆ ಹಾಗೂ 5.5 ಕಿಮೀಭೂಮಿಯ ಮೇಲೆ ನಿರ್ಮಿಸಲಾಗಿದೆ.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ರಮೇಶ್ ಬೈಸ್, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉಪಸ್ಥಿತರಿದ್ದರು.