ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಚೀನಾವನ್ನು ಹಿಂದೆ ಹಾಕಿದೆ.
ಅದರಂತೆ ಭಾರತದ ಜನಸಂಖ್ಯೆ 2060ರ ದಶಕದ ಆರಂಭದಲ್ಲಿ ಭಾರಿ ಏರಿಕೆಯಾಗಿ 170 ಕೋಟಿ ದಾಟಲಿದೆ ಎಂದು ವಿಶ್ವಸಂಸ್ಥೆಯ ಹೊಸ ವರದಿ ತಿಳಿಸಿದೆ.
ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಿ ಕಳೆದ ವರ್ಷ ಚೀನಾವನ್ನು ಹಿಂದಿಕ್ಕಿದ ಭಾರತ, 2100ರ ವರೆಗೂ ಆ ಸ್ಥಾನವನ್ನು ಉಳಿಸಿಕೊಳ್ಳಲಿದೆ ಎಂದು ತಿಳಿದು ಬಂದಿದೆ.