ಢಾಕಾ: “ನೆನಪಿಡಿ, ಪಂಡಿತರೇ ಮತ್ತು ಹಿಂದೂಗಳೇ, ಭಾರತದ ಒಂದು ಕಡೆ ಪಾಕಿಸ್ತಾನ ಮತ್ತು ಇನ್ನೊಂದು ಕಡೆ ಬಾಂಗ್ಲಾದೇಶ ಇದೆ. ಅವರು ನಿಮ್ಮ ದೇಶವನ್ನು ಪ್ರವೇಶಿಸಿ ನಿಮ್ಮ ಕತ್ತು ಕತ್ತರಿಸಿ ನಾಯಿಗಳಿಗೆ ತಿನ್ನಿಸುತ್ತಾರೆ” ಎಂದು ಬಾಂಗ್ಲಾದೇಶದ ಮುಸ್ಲಿಂ ಧಾರ್ಮಿಕ ಮುಖಂಡ ಹಬೀಬುಲ್ಲಾ ಅರಮಾನಿ ಹೇಳಿದ್ದಾನೆ. ಈತನ ಪ್ರಚೋದನಕಾರಿ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಗಾಜಿಪುರದಲ್ಲಿ ಈತ ಈ ಹೇಳಿಕೆ ನೀಡಿದ್ದು ಎನ್ನಲಾಗಿದೆ. ಆದರೆ ಈ ಬಗ್ಗೆ ಗಾಜಿಪುರ ಪೊಲೀಸರು ‘ ಇದು ಬಾಂಗ್ಲಾದೇಶಕ್ಕೆ ಸಂಬಂಧಪಟ್ಟ ವಿಡಿಯೋ’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ ಮೌಲಾನಾ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲವು ನಾಯಕರು ಮೌಲಾನಾ ಹೇಳಿಕೆ “ಅಸಹಿಷ್ಣುತೆ ಮತ್ತು ಕೋಮುವಾದವನ್ನು ಉತ್ತೇಜಿಸುತ್ತದೆ” ಎಂದಿದ್ದಾರೆ. ಇದೇ ವೇಳೆ ಇನ್ನೂ ಕೆಲವು ಮುಖಂಡರು ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶ ಹೊರಬರುವಂತೆ ಒತ್ತಾಯಿಸಿದ್ದಾರೆ.
