ಟೋಕಿಯೋ: ಜಪಾನ್ ಸರ್ಕಾರವು ಭಾರತೀಯ ಪ್ರವಾಸಿಗರಿಗೆ ಇ-ವೀಸಾಗಳನ್ನು ಪರಿಚಯಿಸಿದೆ. ಪ್ರವಾಸೋದ್ಯಮಕ್ಕಾಗಿ 90 ದಿನಗಳ ವಾಸ್ತವ್ಯವನ್ನು ನೀಡುತ್ತದೆ.
ಇದರಲ್ಲಿ ವಿಶೇಷವೆಂದರೆ ಪಾಸ್‌ಪೋರ್ಟ್‌ನಲ್ಲಿ ಯಾವುದೇ ಭೌತಿಕ ವೀಸಾ ಸ್ಟಿಕ್ಕರ್ ಅಗತ್ಯವಿಲ್ಲ. ಜಪಾನ್‌ಗೆ ಭೇಟಿ ನೀಡಿಲು ಇ-ವೀಸಾಗಾಗಿ ಅರ್ಜಿ ಸಲ್ಲಿಸುವವರು VFS ಗ್ಲೋಬಲ್ ಮೂಲಕ ಅರ್ಜಿ ಸಲ್ಲಿಸಬಹುದು ಮತ್ತು ಎಲೆಕ್ಟ್ರಾನಿಕ್ ವೀಸಾಗಳನ್ನು ನೇರವಾಗಿ ಮೇಲ್‌ನಲ್ಲಿ ಸ್ವೀಕರಿಸಬಹುದು. ವಿಮಾನ ನಿಲ್ದಾಣದ ಚೆಕ್-ಇನ್ ಸಮಯದಲ್ಲಿ ಎರಡು ಆಯಾಮದ ಬಾರ್‌ಕೋಡ್‌ನೊಂದಿಗೆ ವೀಸಾ ನೀಡಿಕೆಯ ಸೂಚನೆಯನ್ನು ಪ್ರದರ್ಶಿಸಬಹುದು. ಈ ಸುವ್ಯವಸ್ಥಿತ ಪ್ರಕ್ರಿಯೆಯು ಪ್ರಯಾಣದ ಅನುಕೂಲತೆಯನ್ನು ಹೆಚ್ಚಿಸಿದೆ.