ಮಾಲೆ:ಲಕ್ಷದ್ವೀಪಕ್ಕೆ ಭೇಟಿ ನೀಡಿ ಫೋಟೋಶೂಟ್ನಲ್ಲಿ ಭಾಗಿಯಾಗಿದ್ದ ನರೇಂದ್ರ ಮೋದಿ ಹಾಗೂ ಭಾರತೀಯರ ಬಗ್ಗೆ ಅವಹೇಳನಕಾರಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ಮಾಲ್ಡೀವ್ಸ್‌ನ ಮೂವರು ಸಚಿವರನ್ನು ಅಲ್ಲಿನ ಸರ್ಕಾರ ಜ. 7ರಂದು ಅಮಾನತುಗೊಳಿಸಿದೆ.
ಸಚಿವರಾದ ಮರಿಯಮ್ ಶಿಯುನಾ , ಮಲ್ಶಾ ಮತ್ತು ಹಸನ್ ಜಿಹಾನ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮಾಲ್ಡೀವ್ಸ್ ಸಚಿವರ ಈ ಹೇಳಿಕೆಗಳಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಮಾಲ್ಡೀವ್ಸ್‌ಗೆ ಹೋಗುವ ತಮ್ಮ ಪ್ರವಾಸವನ್ನು ರದ್ದುಗೊಳಿಸುವುದಾಗಿ ಭಾರತೀಯ ಪ್ರವಾಸಿಗರು ಹೇಳಿಕೊಂಡಿದ್ದಾರೆ. ಮಾಲ್ಡೀವ್ಸ್ ಪ್ರವಾಸದ ವಿಮಾನದ ಟಿಕೆಟ್ ರದ್ದುಗೊಳಿಸಿರುವ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ‘#BoycottMaldives’ ಅಭಿಯಾನ ನಡೆಸುತ್ತಿದ್ದಾರೆ.