ಹೈದರಾಬಾದ್: ಸೂರ್ಯ ಗ್ರಹದ ಬಗ್ಗೆ ಅಧ್ಯಯನ ಕೈಗೊಳ್ಳಲು ಆದಿತ್ಯ L1 ಮಿಷನ್ ರಾಕೆಟ್ ಸೂರ್ಯನತ್ತ ಗುರಿ ಇಟ್ಟು ಪ್ರಯಾಣ ಬೆಳೆಸಿದೆ. ಸೂರ್ಯನನ್ನು ತಲುಪಲು ಪಿಎಸ್‌ಎಲ್‌ವಿ ವಾಹನ 15 ಲಕ್ಷ ಕಿಲೋಮೀಟರ್ ದೂರವನ್ನು ಬಾಹ್ಯಾಕಾಶದಲ್ಲಿ ಕ್ರಮಿಸಬೇಕಿದೆ. ಶನಿವಾರ ಬೆಳಿಗ್ಗೆ 11 ಗಂಟೆ 50 ನಿಮಿಷಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಇರುವ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ L1 ರಾಕೆಟ್‌ಅನ್ನು ಉಡಾವಣೆ ಮಾಡಲಾಗಿದೆ.