RRB NTPC Recruitment 2024 – ಭಾರತೀಯ ರೈಲ್ವೆ ಇಲಾಖೆಯು ನಿರುದ್ಯೋಗಿಗಳಿಗೆ ಹಲವು ಉದ್ಯೋಗ ಅವಕಾಶವನ್ನು ಕಲ್ಪಿಸಿ ಕೊಡುತ್ತಿದೆ. ಸದ್ಯಕ್ಕೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಟಿಕೆಟ್ ಸೂಪರ್ವೈಸರ್, ಸ್ಟೇಷನ್ ಮಾಸ್ಟರ್, ಕ್ಲರ್ಕ್ ಸೇರಿದಂತೆ ಹಲವಾರು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ವಿವಿಧ ಎಂಟು ಸಾವಿರಕ್ಕೂ ಅಧಿಕ ಹುದ್ದೆಗಳ ವಿವರವು ಈ ಕೆಳಗಿನಂತಿದೆ : * ಸ್ಟೇಷನ್ ಮಾಸ್ಟರ್ – 994 * ಗೂಡ್ಸ್ ಟ್ರೈನ್ ಮ್ಯಾನೇಜರ್ – 3,144 * ಜೂನಿಯರ್ ಅಕೌಂಟೆಂಟ್ ಅಸಿಸ್ಟೆಂಟ್ – 1,507 * ಟೈಪಿಸ್ಟ್ – 732 * ಟಿಕೆಟ್ ಸೂಪರ್ವೈಸರ್ – 1,736 ರೈಲ್ವೆ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿವಿಧ ಅರ್ಹತೆಗಳು :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಹುದ್ದೆಗಳಿಗೆ ಅನುಗುಣವಾಗಿ ಅಧಿಕೃತ ಅಧಿಸೂಚನೆಯಲ್ಲಿ ನಿಗದಿಸಿರುವಂತೆ ಸಂಬಂಧಪಟ್ಟ ವಿಷಯಗಳಲ್ಲಿ ಪದವಿ ಶಿಕ್ಷಣ ಮುಗಿಸಿರಬೇಕು. ಪ್ರಮುಖವಾಗಿ ನೀವು ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಟೈಪಿಂಗ್ ಮಾಡುವ ಜ್ಞಾನ ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯೋಮಿತಿಯು 18ರಿಂದ ಗರಿಷ್ಠ 36 ವರ್ಷದ ಒಳಗಿರಬೇಕು. ಒಂದು ವೇಳೆ ನೀವು ಮೀಸಲಾತಿ ವರ್ಗಗಳಲ್ಲಿ ಬರುವುದಾದರೆ ನಿಮಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು. ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ವಿವಿಧ ಸೌಲಭ್ಯಗಳ ಜೊತೆಗೆ ಮಾಸಿಕ 29,200ರೂ. ಯಿಂದ 35,400 ರೂ. ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ – ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 500 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಉಳಿದ ಮೀಸಲಾತಿ ವರ್ಗಗಳ ಅಡಿಯಲ್ಲಿ ಬರುವವರು ಅರ್ಜಿ ಶುಲ್ಕವಾಗಿ 250 ರೂ. ಪಾವತಿಸಬೇಕು. ಅರ್ಜಿ ಸಲ್ಲಿಸಲು ಅಕ್ಟೋಬರ್ 15, 2024 ಕೊನೆಯ ದಿನಾಂಕ ವಾಗಿರುತ್ತದೆ. ಅರ್ಹತೆ ಹೊಂದಿರುವ ಎಲ್ಲಾ ಅಭ್ಯರ್ಥಿಗಳು ಕೊನೆಯ ದಿನಾಂಕದ ಒಳಗಾಗಿಯೇ ಅರ್ಜಿ ಸಲ್ಲಿಸಿ. ರೈಲ್ವೆ ಇಲಾಖೆಯ ಈ ನೇಮಕಾತಿಯ ಪ್ರಮುಖ ಲಿಂಕುಗಳು : * ಅರ್ಜಿ ಸಲ್ಲಿಸಲು ಅಧಿಕೃತ ಜಾಲತಾಣ – www.rrbbnc.gov.in
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ