ನವದೆಹಲಿ: ಭಾರತೀಯ ವಾಯುಪಡೆಯ ಮೊದಲ C-295 ಸಾರಿಗೆ ವಿಮಾನವನ್ನು ಔಪಚಾರಿಕವಾಗಿ ವಾಯುಪಡೆಗೆ ಇಂದು ಸೇರಿಸಲಾಯಿತು.
ಉತ್ತರ ಪ್ರದೇಶದ ಗಾಜಿಯಾಬಾದ್ನ ಹಿಂಡನ್ ವಾಯುನೆಲೆಯಲ್ಲಿ ಭಾರತ್ ಡ್ರೋನ್ ಶಕ್ತಿ -2023 ಪ್ರದರ್ಶನವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಉದ್ಘಾಟಿಸಿ ವಾಯುಪಡೆಗೆ ಸರಕು ವಿಮಾನವನ್ನು ಹಸ್ತಾಂತರಿಸಿದರು.
ಇನ್ನು ಈ ವಿಮಾನವು ಸ್ಪೇನ್ನಿಂದ ಹೊರಟು ಸುಮಾರು 6,854 ಕಿಲೋಮೀಟರ್ ದೂರವನ್ನು ಕ್ರಮಿಸಿದ ನಂತರ ಸೆಪ್ಟೆಂಬರ್ 20 ರಂದು ವಡೋದರಾಕ್ಕೆ ಬಂದು ತಲುಪಿದೆ. ಇಂದು ಈ ವಿಮಾನವು ವಡೋದರಾದಿಂದ ಹೊರಟು ಹಿಂಡನ್ ವಾಯುನೆಲೆಯನ್ನು ತಲುಪಿದೆ.