ನವದೆಹಲಿ: ಭಾರತೀಯ ನೌಕಾಪಡೆ ಮತ್ತು ಥೈಲ್ಯಾಂಡ್ ನೌಕಾಪಡೆಯ ನಡುವಿನ ಮೊದಲ ದ್ವಿಪಕ್ಷೀಯ ಕಡಲ ಸಮರಾಭ್ಯಾಸಕ್ಕೆ ‘ಎಕ್ಸ್-ಅಯುತ್ಥಾಯ’ ಎಂದು ನಾಮಕರಣ ಮಾಡಲಾಗಿದೆ.
ಭಾರತ ಹಾಗೂ ಥೈಲ್ಯಾಂಡ್ ನಡುವೆ ೨೦೨೩ ರ ಡಿ 20-23 ರಂದು ಸಮರ ಅಭ್ಯಾಸ ನಡೆದಿತ್ತು. ಈ ಸಮರಾಭ್ಯಾಸದಲ್ಲಿ ಸ್ಥಳೀಯವಾಗಿ ನಿರ್ಮಿಸಲಾದ ಕುಲಿಶ್ ಮತ್ತು IN-LCU 56 ಎಂಬ ಹೆಸರಿನ ಭಾರತೀಯ ನೌಕ ಹಡಗುಗಳು ಭಾಗವಹಿಸಿದ್ದವು. ಇದರೊಂದಿಗೆ ಥೈಲ್ಯಾಂಡ್ ನ ಹಿಸ್ ಥಾಯ್ ಮೆಜೆಸ್ಟಿಯ ಹಡಗನ್ನು ಪ್ರಚುವಾಪ್ ಖಿರಿ ಖಾನ್ ಪ್ರತಿನಿಧಿಸಿದರು.
ಎರಡೂ ದೇಶದ ನೌಕ ಪಡೆಗಳು ಮೊದಲ ಹಂತದಲ್ಲಿ ಆಯುಧದ ಗುಂಡಿನ ದಾಳಿ, ಸೀಮನ್ಶಿಪ್ ವಿಕಸನಗಳು ಮತ್ತು ಯುದ್ಧತಂತ್ರದ ಕುಶಲತೆ ಸೇರಿದಂತೆ ಮೇಲ್ಮೈ ಮತ್ತು ವಾಯು-ವಿರೋಧಿ ಕಸರತ್ತು ನಡೆಸಿದವು.ಚೊಚ್ಚಲ ದ್ವಿಪಕ್ಷೀಯ ಕಸರತ್ತಿನ ಜೊತೆಗೆ ಭಾರತ-ಥಾಯ್ಲೆಂಡ್ ಸಮನ್ವಯ ಪೆಟ್ರೋಲ್ (ಇಂಡೋ-ಥಾಯ್ CORPAT) ನ 36 ನೇ ಆವೃತ್ತಿಯನ್ನು ಸಹ ನಡೆಸಲಾಯಿತು. ಜೊತೆಗೆ ಸಮರಾಭ್ಯಾಸದ ಸಮುದ್ರ ಹಂತದಲ್ಲಿ ನೌಕಾಪಡೆಗಳ ಕಡಲ ಗಸ್ತು ವಿಮಾನಗಳು ಭಾಗವಹಿಸಿದ್ದವು.