ಭಾರೀ ಏರಿಕೆಯಾಗಿದ್ದ ಬೆಳ್ಳುಳ್ಳಿ ಬೆಲೆ ರಾಜ್ಯದಲ್ಲಿ ದಿಢೀರ್ ಇಳಿಕೆ ಕಂಡಿದೆ. ಜನವರಿ-ಫೆಬ್ರವರಿಯಲ್ಲಿ ಕೆಜಿಗೆ 500 ರೂಪಾಯಿ ತಲುಪಿದ್ದ ಬೆಲೆ, ಇದೀಗ 150-200 ರೂ.ಗೆ ಇಳಿಕೆಯಾಗಿದೆ.
ಮಧ್ಯಪ್ರದೇಶ, ರಾಜಾಸ್ಥಾನ, ಗುಜರಾತ್ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಬೆಳ್ಳುಳ್ಳಿಯನ್ನು ಯಥೇಚ್ಛವಾಗಿ ಬೆಳೆಯಲಾಗಿದೆ.
ಹೀಗಾಗಿ, ಉತ್ಪಾದನೆಯು ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದರಿಂದ ಬೆಲೆ ಇಳಿಕೆಯಾಗಿದೆ. ದರ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.