ಬೆಂಗಳೂರು: ಚಂದ್ರಯಾನ 3 ಬಾಹ್ಯಾಕಾಶ ನೌಕೆಯಯನ್ನು ಯಶಸ್ವಿಯಾಗಿ ನಿಗದಿತ ಕಕ್ಷೆಯಲ್ಲಿ ಇರಿಸಿದ್ದ ಎಲ್ವಿಎಂ ಎಂ 4 ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಭಾಗವು ಅನಿಯಂತ್ರಿತವಾಗಿ ಭೂಮಿಯ ಕಡೆ ಮರಳಿದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಚಂದ್ರಯಾನ 3 ಉಡಾವಣೆಯಾಗಿತ್ತು, ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯಿತು. ನಿಗದಿತ ಕಕ್ಷೆಯಲ್ಲಿ ಇರಿಸಿದ್ದ ಎಲ್ವಿಎಂ ಎಂ 4 ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಭಾಗವು ಅನಿಯಂತ್ರಿತವಾಗಿ ಭೂಮಿಯ ಕಡೆ ಮರಳಿದೆ. ಈ ಮಾಹಿತಿಯನ್ನು ಇಸ್ರೋ ನೀಡಿದೆ.
ಭಾರತವು ಚಂದ್ರನನ್ನು ತಲುಪಿದ ವಿಶ್ವದ ನಾಲ್ಕನೇ ದೇಶ ಮತ್ತು ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶವಾಗಿದೆ. ಇಳಿದ ನಂತರ ಸುಮಾರು 14 ದಿನಗಳಲ್ಲಿ ಅನೇಕ ಪ್ರಮುಖ ಮಾಹಿತಿಯನ್ನು ಸಂಗ್ರಹಿಸಲಾಯಿತು. ಸೆಪ್ಟೆಂಬರ್ 2ರಂದು ಸ್ಲೀಪ್ ಮೋಡ್ಗೆ ಹೋದ ವಿಕ್ರಮ್ ಲ್ಯಾಂಡರ್ ಇನ್ನೂ ದೀರ್ಘ ನಿದ್ರೆಯಲ್ಲಿದೆ, ಇಸ್ರೋ ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದರೂ, ಲ್ಯಾಂಡರ್ ಮತ್ತು ರೋವರ್ ಅನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿಯನ್ನು ನೀಡಿದ್ದಾರೆ.