ಮಂಗಳೂರು : ಇಸ್ರೇಲ್ ಮೇಲೆ ದಾಳಿ ನಡೆಸಿ ಸಾವು – ನೋವುಗಳಿಗೆ ಕಾರಣರಾದ ಪ್ಯಾಲೆಸ್ತೈನ್ ಹಮಾಸ್ ಉಗ್ರರನ್ನು ಬೆಂಬಲಿಸಿ ಪ್ರಾರ್ಥನೆ ಮಾಡುವಂತೆ ಮಂಗಳೂರಿನ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾನೆ. ಹಮಾಸ್ ಬಂಡುಕೋರರನ್ನು ದೇಶಪ್ರೇಮಿಗಳೆಂದು ಬಣ್ಣಿಸಿ ವಿಶ್ವ ಕಬರಸ್ಥಾನ ಪ್ರೇಮಿ ಸಂಘದ ಸದ್ಯ ಮಂಗಳೂರಿನ ಬಂದರಿನ ಝಾಕಿರ್ ಎಂಬಾತ ಈ ವೀಡಿಯೋ ವೈರಲ್ ಮಾಡಿದವನು.
ಪ್ಯಾಲಿಸ್ಟೈನ್ ಹಾಗೂ ಹಮಾಸ್ ದೇಶಪ್ರೇಮಿ ಯೋಧರಿಗೆ ಜಯ ದೊರಕಲು ಪ್ರಾರ್ಥಿಸುವಂತೆ ಕರೆ ನೀಡಿದ್ದಾನೆ. ಅದಕ್ಕಾಗಿ ವಿಶ್ವ ಕಬರಸ್ಥಾನ್ ಸಂಘದ ಸದಸ್ಯರು ಪ್ರತ್ಯೇಕ ಪ್ರಾರ್ಥನೆ ಸಲ್ಲಿಸುವಂತೆ ಹೇಳಿದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ಈ ವಿಡಿಯೋಗೆ ಇದೀಗ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹಿಂದೂ ಸಂಘಟನೆಗಳೂ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಕ್ಷಣ ಝಾಕಿರ್ ನನ್ನು ಬಂಧಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.