ಮಂಗಳೂರು: ಕಾಲೇಜು ID ತೋರಿಸಿದ್ರೆ ಇಲ್ಲಿ ಮದ್ಯ ಡಿಸ್ಕೌಂಟ್‌ ಅಂತೆ..! ಹುಡುಗಿಯರೇ ನಿಮಗೆ ಫ್ರೀ

ಮಂಗಳೂರು : ಮಂಗಳೂರು ತನ್ನ ದೇವಸ್ಥಾನಗಳಿಗೆ, ಕಡಲತೀರಗಳಿಗೆ ಹಾಗೂ ಕೈಗಾರಿಕೆಗಳಿಗೆ ತುಂಬಾ ಹೆಸರುವಾಸಿಯಾಗಿದೆ. ಬುದ್ಧಿವಂತರ ಜಿಲ್ಲೆ ಎಂಬ ಬಿರುದು ಕೂಡ ಇದೆ. ಅದರ ಜೊತೆಗೆ ವಿವಿಧ ಕೈಗಾರಿಕಾ ಕ್ಷೇತ್ರ, ಇಂಜಿನಿಯರಿಂಗ್, ಮೆಡಿಕಲ್, ಡಿಗ್ರಿ ಹೀಗೆ ನೂರಾರು ಶಿಕ್ಷಣ ಸಂಸ್ಥೆಗಳು ಕಡಲನಗರಿ ಮಂಗಳೂರಿನಲ್ಲಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಮಾದಕ ನಶೆ ಯುವ ಜನತೆಯ ಹಾದಿ ತಪ್ಪಿಸುತ್ತಿದೆ. ಇದರ ಜೊತೆಗೆ ಹಣ ಮಾಡಲು ಯುವ ಜನರನ್ನು ವಿವಿಧ ಆಫರ್‌ಗಳ ಮೂಲಕ ಸೆಳೆಯೋ ಪಬ್ ಗಳ ಹಾವಳಿ ಕೂಡ ಇದೆ. ಅಂತಹ ಒಂದು ಆಫರ್‌ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. “ಲಿಕ್ಕರ್ ಲಾಂಜ್” (LIQUOR LOUNGE) ಹೆಸರಿನ ಪಬ್ ದೇರೆಬೈಲ್ ಕೊಂಚಾಡಿ ಇಲ್ಲಿ ಕಾರ್ಯಾಚರಿಸುತ್ತಿದ್ದು, ಬುಧವಾರ ಆಯೋಜಿಸಿದ್ದ ಈ ವಿಭಿನ್ನ ಮಾರಕ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಕೈ ಬೀಸಿ ಕರೆದಿದೆ. .ಪೋಸ್ಟರ್ ನೋಡಿ….. “ವಿದ್ಯಾರ್ಥಿಗಳಿಗೆ ಕುಡಿದು ಕುಪ್ಪಳಿಸಲು ಸುವರ್ಣ ಅವಕಾಶ ನೀಡುವ ಪಬ್… ನಿಮ್ಮ ಕಾಲೇಜ್ ಐಡಿ ಜೊತೆಗೆ ಬನ್ನಿ … ಹುಡುಗಿಯರೇ ನಿಮಗೆ ಫ್ರೀ… ಮದ್ಯ ನೀಡುತ್ತೇವೆ ಕುಡಿಯಿರಿ ನಶೆಯಲ್ಲಿ ತೇಲಾಡಿ..” ಎಂದು ಕೈ ಬೀಸಿ ಕರೆಯುವ ಕರೆಯೋಲೆ. ಸದ್ಯ ಇವರ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ವಿದ್ಯಾರ್ಥಿಗಳಿಗೆ ಈ ರೀತಿ ಆಮಿಷ ನೀಡಿ ಕರೆಯುವುದು ಎಷ್ಟು ಸರಿ.!? ಅದು ಅಲ್ಲದೆ ಕಾಲೇಜು ಐಡಿ ತಂದರೆ ಮಾತ್ರ ಅವಕಾಶ. ಹುಡುಗಿಯರಿಗೆ ಉಚಿತವಾಗಿ ಕುಡಿಯಲು ಅವಕಾಶ. ಇದು ಜುಲೈ 24ರಂದು ನಡೆದಿದೆ.

ಇದರ ವಿರುದ್ಧ ಯಾವ ಕ್ರಮವು ಜರಗಿಲ್ಲ. ಈ ನಶೆಯ ಲೋಕಕ್ಕೆ ಯಾವ ಪೊಲೀಸ್ ದಾಳಿಯು ನಡೆಯುವುದಿಲ್ಲ ಯಾಕೆ.?? ಸದ್ಯ ಇದರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆ “ಆಂಟಿ ಡ್ರಗ್ ಸ್ಕ್ವಾಡ್” ಎಂಬ ಘಟಕ ರಚಿಸಿ ಬಿಗು ಕಾರ್ಯಾಚರಣೆ ನಡೆಸಿ ಹಲವೆಡೆ ಡ್ರಗ್ಸ್ ಪೆಡ್ಲರ್ ಗಳ ಹೆಡೆಮುರಿ ಕಟ್ಟಿದೆ. ಆದರೆ ಈಗಿನ ದಿನಗಳಲ್ಲಿ ಯಾವುದೇ ಲೈಸೆನ್ಸ್ ಇಲ್ಲದೆ ಕಾರ್ಯಾಚರಣೆ ನಡೆಸುತ್ತಿರುವ ಪಬ್ ಗಳು ಡ್ರಗ್ಸ್ ಎಂಬ ಮಹಾಮಾರಿಯ ಅಕ್ರಮ ಅಡ್ಡೆಯಾಗಿದೆ. ಮಂಗಳೂರು ಪಬ್ ಗಳು ಮಾದಕ ಲೋಕವಾಗಿ ಮಾರ್ಪಟ್ಟಿದೆ ಎನ್ನುವುದರಲ್ಲಿ ಸಂಶಯವಿಲ್ಲ…ನಮ್ಮ ಮಂಗಳೂರಿನಲ್ಲಿ ಇರುವ ತುಳುನಾಡಿನ ಸಂಪ್ರದಾಯ, ನಮ್ಮ ಸಂಸ್ಕೃತಿಗೆ ಧಕ್ಕೆ ತರುವಂತೆ ಈ ಪಬ್ ಗಳು ಇಂದಿನ ದಿನಗಳಲ್ಲಿ ತಲೆಎತ್ತಿ ಕಾರ್ಯಾಚರಿಸುತ್ತಿವೆ. ವಿದ್ಯಾಭ್ಯಾಸ ಅರಸಿ ಬೇರೆ ಬೇರೆ ರಾಜ್ಯ, ಊರುಗಳಿಂದ ಬರುವ ವಿದ್ಯಾರ್ಥಿಗಳು ಹೀಗೆ ನಶೆ ಲೋಕಕ್ಕೆ ಬೀಳಲು ನಮ್ಮ ಕಡಲನಗರಿ ಕಾರಣವಾಗುತ್ತಿದೆ. ಪೋಷಕರು ಲಕ್ಷಾಂತರ ಹಣ ಸುರಿದು ಮಕ್ಕಳು ವಿದ್ಯಾಭ್ಯಾಸ ಮಾಡಲಿ ಎಂದು ನಗರಕ್ಕೆ ಕಳುಹಿಸಿದರೆ ಇಲ್ಲಿ ಮಕ್ಕಳು ಹಾಳಾಗುವ ಭಯ ಪೋಷಕರನ್ನು ದಿನೇ ದಿನೇ ಕಾಡುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ವಿದ್ಯಾರ್ಥಿಗಳ ಬದುಕನ್ನು ಹಾಳು ಮಾಡುತ್ತಿರುವ ಇಂತಹ ಪಬ್‌ಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಸಾಕಷ್ಟಿದೆ .

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement